* ಕಳೆದ ಮೂರು ವರ್ಷಗಳಲ್ಲಿ ತೆಲಂಗಾಣ, ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಈ ಮೂರು ರಾಜ್ಯಗಳು ಟಾಪ್ 3 ರಾಜ್ಯಗಳಾಗಿವೆ ಎಂದು ಕೇಂದ್ರ ಗ್ರಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.* 2020-22ರ ಅವಧಿಯಲ್ಲಿ ತೆಲಂಗಾಣದಲ್ಲಿ 30,596, ಕರ್ನಾಟಕದಲ್ಲಿ 31,433, ಮಹಾರಾಷ್ಟ್ರದಲ್ಲಿ 19,307 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.* ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದರೂ, ಆರೋಪಿಗಳ ಪತ್ತೆಹಚ್ಚುವಿಕೆ, ಶಿಕ್ಷೆಯ ಪ್ರಮಾಣ ತೀರಾ ಕಡಿಮೆಯಾಗಿದೆ. ಬಂಧನ ಮತ್ತು ಕೃತ್ಯಗಳ ನಡುವೆ ಆಜಗಜಾಂತರ ವ್ಯತ್ಯಾಸವಿದೆ ಎಂದು ಸಚಿವಾಲಯ ತಿಳಿಸಿದೆ.* ಮಹಾರಾಷ್ಟ್ರವು 2020 ಮತ್ತು 23ರ ನಡುವೆ 5,912 ಪ್ರಕರಣಗಳನ್ನು ದಾಖಲಿಸಿದೆ. ಆದರೆ ಕೇವಲ 45 ಜನರಿಗೆ ಶಿಕ್ಷೆ ವಿಧಿಸಲಾಗಿದೆ. ತೆಲಂಗಾಣದಲ್ಲಿ 19,900 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದರೆ, 253 ಮಂದಿಗೆ ಮಾತ್ರ ಶಿಕ್ಷೆಯಾಗಿದೆ. ಮತ್ತೊಂದೆಡೆ, ಕರ್ನಾಟಕದಲ್ಲಿ ಕೇವಲ ಆರು ಪ್ರಕರಣಗಳು ಮಾತ್ರವೇ ದಾಖಲಾಗಿವೆ. ಆದರೆ ಯಾವುದೇ ಕೇಸ್ನಲ್ಲೂ ಶಿಕ್ಷೆ ಆಗಿಲ್ಲ. ಹಾಗಾಗಿ ಶಿಕ್ಷೆಯ ಪ್ರಮಾಣ ಶೂನ್ಯವಾಗಿದೆ.* ಸೈಬರ್ ಅಪರಾಧಗಳನ್ನು ನಿಗ್ರಹಿಸಲು ಕೇಂದ್ರ ಸರಕಾರ ಹಲವು ಉಪಕ್ರಮಗಳನ್ನು ಜಾರಿಗೆ ತಂದಿದೆ.* ಹಣಕಾಸಿನ ವಂಚನೆಗಳ ತಕ್ಷಣದ ವರದಿಗಾಗಿ ಮತ್ತು ವಂಚಕರು ಹಣವನ್ನು ಕಸಿದುಕೊಳ್ಳುವುದನ್ನು ನಿಲ್ಲಿಸಲು I4C ಅಡಿಯಲ್ಲಿ ‘ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಮತ್ತು ಮ್ಯಾನೇಜ್ಮೆಂಟ್ ಸಿಸ್ಟಮ್’ ಅನ್ನು 2021 ರಲ್ಲಿ ಪ್ರಾರಂಭಿಸಲಾಗಿದೆ. ಇದರಲ್ಲಿ 9.9 ಲಕ್ಷಕ್ಕೂ ಅಧಿಕ ದೂರುಗಳು ದಾಖಲಾಗಿದ್ದು, 3431 ಕೋಟಿ ರೂ.ಗಳನ್ನು ಉಳಿಸಿದೆ.* ಸೈಬರ್ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರವು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಅಡಿಯಲ್ಲಿ ಸೈಟ್ರೇನ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ಸೈಬರ್ ಕೈಂ ತನಿಖೆ, ಫೋರೆನ್ಸಿಕ್ ಪ್ರಾಸಿಕ್ಯೂಷನ್ಗಳ ಕುರಿತು ಆನ್ಲೈನ್ ಕೋರ್ಸ್ಗಳನ್ನು ನೀಡುತ್ತದೆ. ಆನ್ಲೈನ್ ದೂರುಗಳನ್ನು ಸಲ್ಲಿಸಲು ನಾಗರಿಕರಿಗೆ ಉಚಿತ ದೂರವಾಣಿ ಸಂಖ್ಯೆ 1930 ಅನ್ನು ನೀಡಿದೆ.* ಈವರೆಗೆ 98,698ಕ್ಕೂ ಅಧಿಕ ಪೊಲೀಸರಿಗೆ ತರಬೇತಿ ನೀಡಿದ್ದು, 75,591 ಪ್ರಮಾಣಪತ್ರಗಳನ್ನು ನೀಡಿದೆ. ಸೈಬರ್ ಅಪರಾಧಗಳನ್ನು ತಡೆಗಟ್ಟುವಲ್ಲಿ ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರ (ಎನ್ಸಿಸಿಸಿ) ಮತ್ತು ಸೈಬರ್ ಫ್ರಾಡ್ ಮಿಟಿಗೇಶನ್ ಸೆಂಟರ್ (ಸಿಎಫ್ ಎಂಸಿ) ಕೂಡ ಮುಂಚೂಣಿ ಯಲ್ಲಿವೆ.* ಸಿಎಫ್ಎಂಸಿ ಸೈಬರ್ ವಂಚನೆಯನ್ನು ಸಮರ್ಥವಾಗಿ ನಿಭಾಯಿಸಲು ಬ್ಯಾಂಕ್ಗಳು. ಬೆಲಿಕಾಂ ಆಪರೇಟರ್ಗಳು ಹಾಗೂ ಕಾನೂನು ಜಾರಿ ಏಜೆನ್ಸಿಗಳ ಉತ್ತೇಜಿಸುತ್ತದೆ.