* ಈ ಶೈಕ್ಷಣಿಕ ವರ್ಷದಿಂದ(2025-26) ಸಿಬಿಎಸ್ಇ, ಐಸಿಎಸ್ಇ, ಐಬಿ ಮತ್ತು ರಾಜ್ಯದ ಇತರ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತೆಲುಗು ಭಾಷೆ ಬೋಧನೆ ಮತ್ತು ಕಲಿಕೆಯನ್ನು ಕಡ್ಡಾಯಗೊಳಿಸಿ ತೆಲಂಗಾಣ ಸರಕಾರ ಆದೇಶ ಹೊರಡಿಸಿದೆ.* 2018ರಲ್ಲಿ ತೆಲಂಗಾಣ ಸರ್ಕಾರ ಶಾಲೆಗಳಲ್ಲಿ ತೆಲುಗು ಕಲಿಕೆಯನ್ನು ಕಡ್ಡಾಯಗೊಳಿಸಿದರೂ, ಹಿಂದಿನ ಬಿಆರ್ಎಸ್ ಸರಕಾರ ಸಂಪೂರ್ಣವಾಗಿ ಜಾರಿಗೆ ತರಲಿಲ್ಲ. ಪ್ರಸ್ತುತ ಕಾಂಗ್ರೆಸ್ ಸರಕಾರ ಈ ಕಾಯ್ದೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲು ಕ್ರಮ ಕೈಗೊಂಡಿದೆ.* ಸಿಎಂ ರೇವಂತ್ ರೆಡ್ಡಿ CBSE, ICSE ಸೇರಿದಂತೆ ಇತರ ಮಂಡಳಿಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಸರಳ ತೆಲುಗು ‘ವೆನ್ನೆಲಾ’ ಪಠ್ಯಪುಸ್ತಕ ಬಳಕೆಗೆ ಸೂಚನೆ ನೀಡಿದ್ದಾರೆ. ಈ ಕುರಿತಾಗಿ ಸರಕಾರವು ಶಾಲಾ ಆಡಳಿತ ಮಂಡಳಿಯೊಂದಿಗೆ ಈಗಾಗಲೇ ಸಭೆ ನಡೆಸಿದೆ.* ‘ಸರಳ ತೆಲುಗು’ ಪಠ್ಯಪುಸ್ತಕ ಮಾತೃಭಾಷೆ ತೆಲುಗು ಅಲ್ಲದ ವಿದ್ಯಾರ್ಥಿಗಳಿಗೆ ಮತ್ತು ಇತರ ರಾಜ್ಯದವರಿಗೆ ಪ್ರಯೋಜನಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.