* ಹಿಂದುಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್‌ಎಎಲ್) ಸಂಪೂರ್ಣ ದೇಶೀಯ ವಾಗಿ ನಿರ್ಮಿಸಿರುವ ಲಘು ಯುದ್ಧ ವಿಮಾನ 'ತೇಜಸ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 25 ರಂದು 30 ನಿಮಿಷ ಹಾರಾಟ ನಡೆಸಿದರು.* ನಗರದಲ್ಲಿರುವ 'ಏರ್‌ಕ್ರಾಫ್ಟ್ ಆವರಣದಲ್ಲಿ ಅವಳಿ ಆಸನಗಳುಳ್ಳ ತೇಜಸ್ ತರಬೇತಿ ವಿಮಾನ ಏರಿದ ಪ್ರಧಾನಿ ಅವರಿಗೆ ಎಚ್‌ಎಎಲ್‌ನ ಪೈಲಟ್ ತೇಜಸ್‌ನ ಸಾಮರ್ಥ್ಯವನ್ನು ಪ್ರಧಾನಿಗೆ ಪ್ರದರ್ಶಿಸಿದರು.* 'ನರೇಂದ್ರ ಮೋದಿ ಅವರು ಯುದ್ಧ ವಿಮಾನವೊಂದರಲ್ಲಿ ಹಾರಾಟ ನಡೆಸಿದ ದೇಶದ ಮೊದಲ ಪ್ರಧಾನಿ' ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.* ಎಚ್‌ಎಎಲ್‌ ವರ್ಷಕ್ಕೆ 8 ಲಘು ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು, 2025 ರ ವೇಳೆಗೆ ವರ್ಷಕ್ಕೆ 16 ಹಾಗೂ ನಂತರದ ಮೂರೂ ವರ್ಷಗಳಲ್ಲಿ 24 ವಿಮಾನ ತಯಾರಿಗೆ ಹೆಚ್ಚುಸುವ ಗುರಿ ಹೊಂದಿದೆ ಎಂದು ವಾಯುಪಡೆ ತಿಳಿಸಿದೆ.