➤ ಭಾರತದ ಸುದೀರ್ಘ ಕರಾವಳಿಯನ್ನು ತೈಲ ಮಾಲಿನ್ಯದಿಂದ ರಕ್ಷಿಸಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಮಹತ್ವದ 'ಟಾರ್ ಬಾಲ್ ನಿರ್ವಹಣಾ ನಿಯಮಗಳು- 2026' ರ ಕರಡನ್ನು ಬಿಡುಗಡೆ ಮಾಡಿದೆ. ಪ್ರತಿ ವರ್ಷ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ತೀವ್ರಗೊಳ್ಳುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಈ ನಿಯಮಗಳ ಮುಖ್ಯ ಉದ್ದೇಶವಾಗಿದೆ.➤ ಟಾರ್ ಬಾಲ್‌ಗಳ (Tar Balls) ಸಮಸ್ಯೆ: ಟಾರ್ ಬಾಲ್‌ಗಳು ಎಂದರೆ ಸಮುದ್ರದಲ್ಲಿ ಚೆಲ್ಲಿದ ಕಚ್ಚಾ ತೈಲವು ಹವಾಮಾನದ ಪ್ರಭಾವದಿಂದ (Weathering) ಗಟ್ಟಿಯಾಗಿ ಸಣ್ಣ ಸಣ್ಣ ಗಾಢ ಬಣ್ಣದ ಜಿಗುಟಾದ ಉಂಡೆಗಳಾಗಿ ಬದಲಾಗುವುದು. ಇವು ಅಲೆಗಳ ಮೂಲಕ ಸಮುದ್ರ ತೀರಕ್ಕೆ ಬಂದು ಸೇರುತ್ತವೆ.- ಪರಿಸರಕ್ಕೆ ಅಪಾಯ: ಈ ಉಂಡೆಗಳನ್ನು ಸಮುದ್ರದ ಹಕ್ಕಿಗಳು, ಮೀನುಗಳು ಮತ್ತು ಆಮೆಗಳು ಆಹಾರವೆಂದು ಭಾವಿಸಿ ಸೇವಿಸುವುದರಿಂದ ಅವುಗಳ ಜೀವಕ್ಕೆ ಸಂಚಕಾರ ಬರುತ್ತದೆ.- ಪಶ್ಚಿಮ ಕರಾವಳಿಯಲ್ಲಿ ಹೆಚ್ಚು: ಭಾರತದ ಪಶ್ಚಿಮ ಕರಾವಳಿಯಲ್ಲಿ (ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್) ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.➤ ಹೊಸ ನಿಯಮಗಳು: 2026ರ ಈ ಕರಡು ನಿಯಮಗಳು ವಿವಿಧ ಸಚಿವಾಲಯಗಳು ಮತ್ತು ಸಂಸ್ಥೆಗಳ ನಡುವೆ ಜವಾಬ್ದಾರಿಯನ್ನು ಹಂಚಿಕೆ ಮಾಡಿವೆ:- ಜವಾಬ್ದಾರಿಯುತ ಸಚಿವಾಲಯಗಳು: ರಕ್ಷಣಾ ಸಚಿವಾಲಯ, ಬಂದರು ಮತ್ತು ಜಲಮಾರ್ಗಗಳ ಸಚಿವಾಲಯ (MPSW), ಮತ್ತು ಪೆಟ್ರೋಲಿಯಂ ಸಚಿವಾಲಯಗಳು (MPNG) ಸಮನ್ವಯದಿಂದ ಕೆಲಸ ಮಾಡಲಿವೆ.- ರಾಜ್ಯ ಮತ್ತು ಜಿಲ್ಲಾ ಆಡಳಿತದ ಪಾತ್ರ: ಸಮುದ್ರ ತೀರಕ್ಕೆ ಬಂದು ಬೀಳುವ ಟಾರ್‌ಬಾಲ್‌ಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ವಿಲೇವಾರಿ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಆಯಾ ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾ ಆಡಳಿತಗಳಿಗೆ ವಹಿಸಲಾಗಿದೆ.- ಬಿಕ್ಕಟ್ಟು ನಿರ್ವಹಣಾ ತಂಡ: ಭಾರತೀಯ ಕರಾವಳಿ ರಕ್ಷಣಾ ಪಡೆ (ICG) ರೂಪಿಸಿರುವ 'ರಾಷ್ಟ್ರೀಯ ತೈಲ ಸೋರಿಕೆ ವಿಪತ್ತು ಸನ್ನದ್ಧತೆ ಯೋಜನೆ' (NOSDCP) ಅಡಿಯಲ್ಲಿ ರಾಜ್ಯ ಮಟ್ಟದ ತಂಡಗಳನ್ನು ರಚಿಸಲು ಪ್ರಸ್ತಾಪಿಸಲಾಗಿದೆ.- ಸಹಭಾಗಿತ್ವ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ನಿಯಮಗಳ ಅನುಷ್ಠಾನದ ಮೇಲೆ ನಿಗಾ ಇಡಲಿದೆ.➤ ನೋಡಲ್ ಏಜೆನ್ಸಿ: ಸಮುದ್ರದಲ್ಲಿ ತೈಲ ಸೋರಿಕೆಯನ್ನು ನಿಯಂತ್ರಿಸುವ ಪ್ರಮುಖ ಏಜೆನ್ಸಿ - ಭಾರತೀಯ ಕರಾವಳಿ ರಕ್ಷಣಾ ಪಡೆ (Indian Coast Guard).