Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಟಾರ್ ಬಾಲ್ ನಿರ್ವಹಣಾ ನಿಯಮಗಳು 2026: ಕರಾವಳಿ ಸಂರಕ್ಷಣೆಗೆ ಹೊಸ ಹೆಜ್ಜೆ
Authored by:
Yallamma G
Date:
10 ಎಪ್ರಿಲ್ 2026
➤ ಭಾರತದ ಸುದೀರ್ಘ ಕರಾವಳಿಯನ್ನು ತೈಲ ಮಾಲಿನ್ಯದಿಂದ ರಕ್ಷಿಸಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಮಹತ್ವದ
'ಟಾರ್ ಬಾಲ್ ನಿರ್ವಹಣಾ ನಿಯಮಗಳು- 2026'
ರ ಕರಡನ್ನು ಬಿಡುಗಡೆ ಮಾಡಿದೆ. ಪ್ರತಿ ವರ್ಷ ಏಪ್ರಿಲ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ತೀವ್ರಗೊಳ್ಳುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಈ ನಿಯಮಗಳ ಮುಖ್ಯ ಉದ್ದೇಶವಾಗಿದೆ.
➤
ಟಾರ್ ಬಾಲ್ಗಳ (Tar Balls) ಸಮಸ್ಯೆ:
ಟಾರ್ ಬಾಲ್ಗಳು ಎಂದರೆ ಸಮುದ್ರದಲ್ಲಿ ಚೆಲ್ಲಿದ ಕಚ್ಚಾ ತೈಲವು ಹವಾಮಾನದ ಪ್ರಭಾವದಿಂದ (Weathering) ಗಟ್ಟಿಯಾಗಿ ಸಣ್ಣ ಸಣ್ಣ ಗಾಢ ಬಣ್ಣದ ಜಿಗುಟಾದ ಉಂಡೆಗಳಾಗಿ ಬದಲಾಗುವುದು. ಇವು ಅಲೆಗಳ ಮೂಲಕ ಸಮುದ್ರ ತೀರಕ್ಕೆ ಬಂದು ಸೇರುತ್ತವೆ.
- ಪರಿಸರಕ್ಕೆ ಅಪಾಯ:
ಈ ಉಂಡೆಗಳನ್ನು ಸಮುದ್ರದ ಹಕ್ಕಿಗಳು, ಮೀನುಗಳು ಮತ್ತು ಆಮೆಗಳು ಆಹಾರವೆಂದು ಭಾವಿಸಿ ಸೇವಿಸುವುದರಿಂದ ಅವುಗಳ ಜೀವಕ್ಕೆ ಸಂಚಕಾರ ಬರುತ್ತದೆ.
- ಪಶ್ಚಿಮ ಕರಾವಳಿಯಲ್ಲಿ ಹೆಚ್ಚು:
ಭಾರತದ ಪಶ್ಚಿಮ ಕರಾವಳಿಯಲ್ಲಿ (ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್) ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
➤
ಹೊಸ ನಿಯಮಗಳು:
2026ರ ಈ ಕರಡು ನಿಯಮಗಳು ವಿವಿಧ ಸಚಿವಾಲಯಗಳು ಮತ್ತು ಸಂಸ್ಥೆಗಳ ನಡುವೆ ಜವಾಬ್ದಾರಿಯನ್ನು ಹಂಚಿಕೆ ಮಾಡಿವೆ:
- ಜವಾಬ್ದಾರಿಯುತ ಸಚಿವಾಲಯಗಳು:
ರಕ್ಷಣಾ ಸಚಿವಾಲಯ, ಬಂದರು ಮತ್ತು ಜಲಮಾರ್ಗಗಳ ಸಚಿವಾಲಯ (MPSW), ಮತ್ತು ಪೆಟ್ರೋಲಿಯಂ ಸಚಿವಾಲಯಗಳು (MPNG) ಸಮನ್ವಯದಿಂದ ಕೆಲಸ ಮಾಡಲಿವೆ.
- ರಾಜ್ಯ ಮತ್ತು ಜಿಲ್ಲಾ ಆಡಳಿತದ ಪಾತ್ರ:
ಸಮುದ್ರ ತೀರಕ್ಕೆ ಬಂದು ಬೀಳುವ ಟಾರ್ಬಾಲ್ಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ವಿಲೇವಾರಿ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಆಯಾ ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾ ಆಡಳಿತಗಳಿಗೆ ವಹಿಸಲಾಗಿದೆ.
- ಬಿಕ್ಕಟ್ಟು ನಿರ್ವಹಣಾ ತಂಡ:
ಭಾರತೀಯ ಕರಾವಳಿ ರಕ್ಷಣಾ ಪಡೆ (ICG) ರೂಪಿಸಿರುವ 'ರಾಷ್ಟ್ರೀಯ ತೈಲ ಸೋರಿಕೆ ವಿಪತ್ತು ಸನ್ನದ್ಧತೆ ಯೋಜನೆ' (NOSDCP) ಅಡಿಯಲ್ಲಿ ರಾಜ್ಯ ಮಟ್ಟದ ತಂಡಗಳನ್ನು ರಚಿಸಲು ಪ್ರಸ್ತಾಪಿಸಲಾಗಿದೆ.
- ಸಹಭಾಗಿತ್ವ:
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ನಿಯಮಗಳ ಅನುಷ್ಠಾನದ ಮೇಲೆ ನಿಗಾ ಇಡಲಿದೆ.
➤
ನೋಡಲ್ ಏಜೆನ್ಸಿ:
ಸಮುದ್ರದಲ್ಲಿ ತೈಲ ಸೋರಿಕೆಯನ್ನು ನಿಯಂತ್ರಿಸುವ ಪ್ರಮುಖ ಏಜೆನ್ಸಿ -
ಭಾರತೀಯ ಕರಾವಳಿ ರಕ್ಷಣಾ ಪಡೆ (Indian Coast Guard).
Take Quiz
Loading...