* ವಿಶ್ವ ಆರೋಗ್ಯ ಸಂಸ್ಥೆ (WHO) ತಾಯಂದಿರ ಮರಣ ಪ್ರಮಾಣ ಕುರಿತಾಗಿ ಆತಂಕಕಾರಿ ಮಾಹಿತಿಯನ್ನು ಪ್ರಕಟಿಸಿದೆ.* 2020ರಲ್ಲಿ ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿಸಿದಂತೆ 2,87,000 ಮಹಿಳೆಯರು ಸಾವನ್ನಪ್ಪಿದ್ದಾರೆ, ಇದು ದಿನಕ್ಕೆ ಸುಮಾರು 800 ಸಾವುಗಳಿಗೆ ಸಮಾನ. ಈ ಹಿನ್ನೆಲೆ, ತಾಯಂದಿರ ಆರೋಗ್ಯಕ್ಕೆ ತುರ್ತು ಕ್ರಮಗಳ ಅಗತ್ಯವಿದೆ ಎಂದು WHO ಹೇಳಿದೆ.* ತಾಯಂದಿರ ಮರಣಕ್ಕೆ ರಕ್ತಸ್ರಾವ ಮತ್ತು ಅಧಿಕ ರಕ್ತದೊತ್ತಡ ಪ್ರಮುಖ ಕಾರಣಗಳಾಗಿವೆ. ಹೆರಿಗೆಯ ಸಮಯದಲ್ಲಿ ಮತ್ತು ನಂತರ ಸಂಭವಿಸಿದ ರಕ್ತಸ್ರಾವದಿಂದ ಶೇ. 27ರಷ್ಟು ಸಾವುಗಳು ನಡೆದಿವೆ. ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳ ಕಾರಣವಾಗಿ ಶೇ. 16ರಷ್ಟು ಸಾವುಗಳು ಸಂಭವಿಸುತ್ತಿವೆ. ಈ ಪ್ರಮಾಣ ಪ್ರಾದೇಶಿಕವಾಗಿ ಬೇರೆಬೇರೆಯಾಗಿದ್ದು, ವಿಶೇಷವಾಗಿ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದಲ್ಲಿ ಹೆಚ್ಚು ಸಾವುಗಳು ದಾಖಲಾಗಿವೆ.* ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದಲ್ಲಿ ತಾಯಂದಿರ ರಕ್ತಸ್ರಾವದಿಂದಾಗುವ ಮರಣ ಪ್ರಮಾಣ ಶೇ. 29, ಸಹಾರ ಆಫ್ರಿಕಾದಲ್ಲಿ ಶೇ. 28, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಶೇ. 15. ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ನಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚು ಕಂಡುಬಂದಿದೆ.* ಹೆರಿಗೆಯ ಬಳಿಕ 42 ದಿನಗಳವರೆಗೆ ತಾಯಂದಿರಿಗೆ ರಕ್ತಸ್ರಾವದಿಂದ ಸಾವು ಸಂಭವಿಸುವ ಸಂಭವ ಹೆಚ್ಚಿರುತ್ತದೆ. 2020ರಲ್ಲಿ ಇಂತಹ ಪ್ರಕರಣಗಳು ತಮ್ಮ ದೇಶದಲ್ಲಿ ಕನಿಷ್ಠ ಒಂದಾದರೂ ಸಂಭವಿಸಿದೆ ಎಂದು 111 ದೇಶಗಳು ವರದಿ ಮಾಡಿವೆ.* ಡಬ್ಲ್ಯುಎಚ್ಒ 2024ರಲ್ಲಿ ಪ್ರಸವಾನಂತರ ರಕ್ತಸ್ರಾವ ತಡೆಗೆ ಜಾಗತಿಕ ಮಾರ್ಗಸೂಚಿ ಪ್ರಾರಂಭಿಸಿದ್ದು, ಇದು ಗರ್ಭಧಾರಣೆ, ಹೆರಿಗೆ ಮತ್ತು ಪ್ರಸವಾನಂತರದ ಅವಧಿ ಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡುವಂತೆ ಒತ್ತಾಯಿಸಿತು.