* ಕಳೆದ ಎರಡು ದಶಕಗಳಲ್ಲಿ ಭಾರತ ತಾಯಂದಿರ ಮರಣ ಪ್ರಮಾಣ (MMR) ಕಡಿಮೆ ಮಾಡುವಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.* ಪ್ರಸ್ತುತ, ಭಾರತದಲ್ಲಿ ಒಂದು ಲಕ್ಷ ಹೆರಿಗೆಗಳಿಗೆ ಸರಾಸರಿ 80 ತಾಯಂದಿರ ಮರಣ ಸಂಭವಿಸುತ್ತಿದೆ. 2018ರಲ್ಲಿ ಇದು 103 ಆಗಿತ್ತು.* Maternal Mortality Estimation Inter-Agency Group (MMEIG) 2000-2023ರ ಡೇಟಾವನ್ನು ಆಧರಿಸಿ ವರದಿ ನೀಡಿದೆ. ಈ ಗುಂಪಿನಲ್ಲಿ WHO, UNICEF, UNFPA, World Bank, UNDESA ಸೇರಿವೆ.* 1990ರೊಂದಿಗೆ ಹೋಲಿಸಿದರೆ ಭಾರತದಲ್ಲಿ ತಾಯಂದಿರ ಮರಣ ಪ್ರಮಾಣದಲ್ಲಿ ಶೇ.86ರಷ್ಟು ಇಳಿಕೆಯಾಗಿದೆ, ಜಾಗತಿಕ ಮಟ್ಟದಲ್ಲಿ ಇದು ಶೇ.48 ರಷ್ಟು ಇಳಿಕೆಯಾಗಿದೆ.* ಜಾಗತಿಕ ತಾಯಂದಿರ ಮರಣದಲ್ಲಿ ಭಾರತದ ಪಾಲು ಶೇ.7.2. ಆಗಿದೆ. * ಭಾರತ ಸರ್ಕಾರದ ಪ್ರತಿಕ್ರಿಯೆ: ಜನಸಂಖ್ಯೆ ಭಿನ್ನತೆಯ ಹಿನ್ನೆಲೆಯಲ್ಲಿ ನೇರ ದೇಶಾಂತರ ಹೋಲಿಕೆ ಸೂಕ್ತವಲ್ಲ.* 2020-23 ಅವಧಿಯಲ್ಲಿ ನೈಜೀರಿಯಾದಲ್ಲಿ 75,000 ತಾಯಂದಿರ ಮರಣವಾಗಿದ್ದರೆ, ಭಾರತದಲ್ಲಿ ಇದರ ಪ್ರಮಾಣ 19,000 ಆಗಿದೆ. * ವಿಶ್ವಸಂಸ್ಥೆಯ ಶಿಫಾರಸು: 2030ರೊಳಗೆ MMR ಅನ್ನು ಲಕ್ಷಕ್ಕೆ 70ಕ್ಕಿಂತ ಕಡಿಮೆಗಿಳಿಸಲು ಎಲ್ಲಾ ದೇಶಗಳು ಕ್ರಮ ಕೈಗೊಳ್ಳಬೇಕು.