* ಜೂನ್ 5 ರಂದು ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯ ಭಗವಾನ್ ಮಹಾವೀರ ಉದ್ಯಾನದಲ್ಲಿ ಸಸಿಯನ್ನು ನೆಟ್ಟು, ನೀರೆರೆದು 'ತಾಯಿ ಹೆಸರಿನಲ್ಲಿ ಒಂದು ಗಿಡ' (ಏಕ್ ಪೇಡ್ ಮಾ ಕೆ ನಾಮ್) ಅಭಿಯಾನವನ್ನು ಮುಂದುವರಿಸಿದರು. ಅರಾವಳಿ ಶ್ರೇಣಿಯ ಮರು ಅರಣೀಕರಣ ಯೋಜನೆಗೂ ಚಾಲನೆ ನೀಡಿದರು.* ಈ ಬಾರಿ 'ತಾಯಿ ಹೆಸರಿನಲ್ಲಿ ಒಂದು ಗಿಡ 2.0' ಹೆಸರಿನ ಅಭಿಯಾನದಡಿ ಜೂನ್ 5 ರಿಂದ ಸೆಪ್ಟೆಂಬರ್ 30ರ ವರೆಗೆ ಭಾರತದೆಲ್ಲೆಡೆ 10 ಕೋಟಿ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ.* ಪ್ರಧಾನ ಮೋದಿ ಅವರು ತಮ್ಮ ನಿವಾಸದಲ್ಲಿ ‘ಸಿಂದೂರ’ ಹೆಸರಿನ ಸಸಿಯನ್ನು ನೆಟ್ಟರು. ಇದು 1971ರ ಯುದ್ಧದಲ್ಲಿ ಶೌರ್ಯ ತೋರಿದ ಮಹಿಳೆಯರಿಂದ ಅವರಿಗೆ ನೀಡಲ್ಪಟ್ಟ ಸಸಿಯಾಗಿದೆ.* ಮಹಾರಾಷ್ಟ್ರದಲ್ಲಿ ಈ ವರ್ಷ 10 ಕೋಟಿ ಗಿಡಗಳನ್ನು ನೆಡುವ ಗುರಿ ಇಟ್ಟುಕೊಂಡಿದ್ದು, ಮುಖ್ಯಮಂತ್ರಿ ಫಡ್ನವೀಸ್ ಅವರು ಇದು ಕೇವಲ ಸಂಖ್ಯೆಗಾಗಿ ಅಲ್ಲ, ಹಸಿರು ಹಾಗೂ ಸುಸ್ಥಿರ ಭವಿಷ್ಯ ನಿರ್ಮಾಣಕ್ಕಾಗಿ ಎಂದಿದ್ದಾರೆ.* ಆಚಾರ್ಯ ಪ್ರಶಾಂತ್ ಅವರಿಗೆ 'ಅತ್ಯಂತ ಪ್ರಭಾವಶಾಲಿ ಪರಿಸರವಾದಿ' ಪ್ರಶಸ್ತಿ ಲಭಿಸಿದೆ. ಅವರು ಆಧ್ಯಾತ್ಮದೊಂದಿಗೆ ಪರಿಸರ ಜಾಗೃತಿ ಜೋಡಿಸಿ 'ಆಪರೇಷನ್ 2030' ಮೂಲಕ ಯುವಕರಿಗೆ ಪ್ರೇರಣೆಯಾಗುತ್ತಿದ್ದಾರೆ.* ಪರಿಸರ ಉಳಿಸಿದರೆ ಅದು ನಮ್ಮನ್ನು ಉಳಿಸುತ್ತದೆ ಎಂಬ ಸರಳ ಸತ್ಯವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪರಿಸರ ಕಾಳಜಿ ಪ್ರತಿದಿನದ ಜೀವನದ ಭಾಗವಾಗಲಿ ಎಂದು ಅವರು ಶುಭ ಕೋರಿದ್ದಾರೆ.