* ಕೇಂದ್ರ ಸಚಿವ ಸಂಪುಟವು ₹4,200 ಕೋಟಿ ಮೌಲ್ಯದ MERITE(ಮೆರೈಟ್) ಯೋಜನೆಗೆ ಅನುಮೋದನೆ ನೀಡಿದ್ದು, 2025-26 ರಿಂದ 2029-30ರವರೆಗೆ ದೇಶದ 175 ಎಂಜಿನಿಯರಿಂಗ್ ಕಾಲೇಜುಗಳು ಮತ್ತು 100 ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಜಾರಿಗೊಳ್ಳಲಿದೆ. ಯೋಜನೆಗೆ ವಿಶ್ವ ಬ್ಯಾಂಕ್ ₹2,100 ಕೋಟಿ ಸಾಲ ನೀಡಲಿದೆ.* ಯೋಜನೆಯ ಉದ್ದೇಶಗಳಲ್ಲಿ ಸಂಶೋಧನೆ ಮತ್ತು ಹೊಸತನ ವೃದ್ಧಿ, ಉದ್ಯೋಗಾರ್ಹತೆ ಕೌಶಲ್ಯ ಸುಧಾರಣೆ, ಆಡಳಿತ ಗುಣಮಟ್ಟ ಬಲಪಡಿಸುವುದು ಹಾಗೂ ಬಹುಶಾಖಾ ಅಧ್ಯಯನ ಉತ್ತೇಜನ ಸೇರಿವೆ.* ಇದಕ್ಕಾಗಿ ಸಂಶೋಧನಾ ಹಬ್ಗಳು, ಇಂಕ್ಯೂಬೇಶನ್ ಕೇಂದ್ರಗಳು, ಕೈಗಾರಿಕೆ-ಶಿಕ್ಷಣ ಸಂಪರ್ಕ, ಕೌಶಲ್ಯ ಲ್ಯಾಬ್ಗಳು, ಮತ್ತು ಮಹಿಳಾ ಅಧ್ಯಾಪಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.* ಯೋಜನೆಯಿಂದ 7.5 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಲಾಭವಾಗುವ ನಿರೀಕ್ಷೆಯಿದ್ದು, ಪಠ್ಯಕ್ರಮ ಮಾರುಕಟ್ಟೆ ಅವಶ್ಯಕತೆಗಳಿಗೆ ಹೊಂದಿಕೆ ಆಗಲಿದೆ.* ತಾಂತ್ರಿಕ ಸಂಸ್ಥೆಗಳ ಮಾನ್ಯತೆ ಪ್ರಮಾಣ, ಸಂಶೋಧನಾ ಉತ್ಪಾದಕತೆ ಹಾಗೂ ಕೈಗಾರಿಕಾ ಸಂಪರ್ಕ ಹೆಚ್ಚಲಿದೆ.* ಸರ್ಕಾರದ ಪ್ರಕಾರ, ಇದು NEP 2020 ಗುರಿಗಳೊಂದಿಗೆ ಹೊಂದಿಕೊಂಡಿರುವ ಮಹತ್ವದ ಶಿಕ್ಷಣ ಸುಧಾರಣೆಯ ಹೆಜ್ಜೆಯಾಗಿದೆ.