* ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ತಾಂತ್ರಿಕ ಶಿಕ್ಷಣದ ಎಲ್ಲಾ ಶಾಖೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ಅಳವಡಿಸಲು ತೀರ್ಮಾನಿಸಿದೆ ಎಂದು ಅಧ್ಯಕ್ಷ ಟಿ.ಜಿ. ಸೀತಾರಾಮ್ ತಿಳಿಸಿದ್ದಾರೆ.* AICTE ಈಗಾಗಲೇ 2017ರಿಂದ ಎಐ ಹಾಗೂ ಡೇಟಾ ಸೈನ್ಸ್ ವಿಷಯಗಳಲ್ಲಿ ಬಿಟೆಕ್ ಕೋರ್ಸ್ಗಳನ್ನು ಆರಂಭಿಸಿದೆ. * ಈಗ ಇಂಜಿನಿಯರಿಂಗ್, ಐಟಿ ಮತ್ತು ಮ್ಯಾನೇಜ್ಮೆಂಟ್ ಸೇರಿ ಎಲ್ಲಾ ಪಠ್ಯಕ್ರಮಗಳಲ್ಲಿ ಎಐ ಅಳವಡಿಸುವ ಯೋಜನೆ ಮುಂದುವರಿಯುತ್ತಿದೆ.* ಈ ಸಂಬಂಧ ತಜ್ಞರ ಸಮಿತಿ ರಚನೆಗೊಂಡಿದ್ದು, ಮೂರು ಸಭೆಗಳನ್ನು ನಡೆಸಿದೆ. ಶಿಫಾರಸುಗಳನ್ನು ಮುಂದಿನ ತಿಂಗಳಲ್ಲಿ ನೀಡಲಿದ್ದು, ಎರಡು ತಿಂಗಳಲ್ಲಿ ಅಂತಿಮ ನಿರ್ಧಾರ ನಿರೀಕ್ಷಿಸಲಾಗಿದೆ. ಹೊಸ ಶೈಕ್ಷಣಿಕ ವರ್ಷದಿಂದಲೇ ಎಐ ಒಳಗೊಂಡ ಪಠ್ಯ ಆರಂಭವಾಗಬಹುದು.* AICTE 1000 ಪಠ್ಯಪುಸ್ತಕಗಳನ್ನು 12 ಭಾರತೀಯ ಭಾಷೆಗಳಲ್ಲಿ ಆನ್ಲೈನ್ನಲ್ಲಿ ಬಿಡುಗಡೆ ಮಾಡಿದ್ದು, ಇವು 7 ಲಕ್ಷದಷ್ಟೂ ಹೆಚ್ಚು ಬಾರಿ ಡೌನ್ಲೋಡ್ ಆಗಿವೆ ಎಂದು ಸೀತಾರಾಮ್ ತಿಳಿಸಿದ್ದಾರೆ.