* ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮುಲ್ಶಿ ತಾಲೂಕಿನ ತಾಹಿನಿ ಘಟ್ಟ ಈ ಬಾರಿ ಭಾರತದ ಅತಿ ಹೆಚ್ಚು ಮಳೆಯ ತಾಣವಾಗಿದೆ. ಈ ಮುಂಗಾರಿನಲ್ಲಿ 9,194 ಮಿಲಿಮೀಟರ್ ಮಳೆ ದಾಖಲಾಗಿದೆ.* ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ತಾಹಿನಿ ಘಟ್ಟವು ಜಿರಾಪುಂಜಿ ಹಾಗೂ ಮೇಘಾಲಯದ ಮಾವ್ಸಿಂರಂನನ್ನು ಹಿಂದಿಕ್ಕಿ ಶ್ರೇಷ್ಠ ಸ್ಥಾನದಲ್ಲಿದೆ.* ಪಶ್ಚಿಮ ಘಟ್ಟಗಳಲ್ಲಿರುವ ಈ ಪ್ರದೇಶ ತನ್ನ ಜಲಪಾತಗಳು ಮತ್ತು ಹಸಿರುಮಯ ಪರಿಸರಕ್ಕಾಗಿ ಪ್ರಸಿದ್ಧವಾಗಿದೆ.* ಹಿಂದಿನ ವರ್ಷವೂ (2024) ತಾಹಿನಿ ಘಟ್ಟವು 9,644 ಮಿಮೀ ಮಳೆ ದಾಖಲಿಸಿ ದೇಶದ ಅತಿ ಹೆಚ್ಚು ಮಳೆಯ ತಾಣವಾಗಿ ಹೊರಹೊಮ್ಮಿತ್ತು. ಈ ಬಾರಿಯೂ ದಾಖಲೆಯ ಮಳೆಯ ಪರಿಣಾಮ ಮುಲ್ಶಿ, ಖಡಕ್ವಾಸ್ಲಾ ಮುಂತಾದ ಅಣೆಕಟ್ಟುಗಳ ನೀರಿನ ಮಟ್ಟ ಹೆಚ್ಚುವಂತೆ ಮಾಡಿದೆ.* ಮುಂಗಾರು ಕಾಲದಲ್ಲಿ ತಾಹಿನಿ ಘಟ್ಟವು ಪ್ರವಾಸಿಗರಿಗೆ ಆಕರ್ಷಕ ತಾಣವಾಗಿದ್ದು, ದಟ್ಟ ಅರಣ್ಯ ಹಾಗೂ ನಿರಂತರ ಮಳೆಯ ಕಾರಣದಿಂದಾಗಿ ನೈಸರ್ಗಿಕ ಸೌಂದರ್ಯ ಮತ್ತಷ್ಟು ಮೆರುಗು ಪಡೆಯುತ್ತದೆ.