* ಇಟಲಿ ಕ್ರಿಕೆಟ್ ತಂಡವು ಮೊದಲ ಬಾರಿಗೆ 2026ರ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದೆ. ಯುರೋಪ್ ವಲಯ ಕ್ವಾಲಿಫೈಯಿಂಗ್ ಟೂರ್ನಿಯಲ್ಲಿ ಇಟಲಿ ತಂಡವು ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 9 ವಿಕೆಟ್ಗಳಿಂದ ಸೋತರೂ, ಉತ್ತಮ ರನ್ ರೇಟ್ನಿಂದಾಗಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದು ಅರ್ಹತೆ ಗಿಟ್ಟಿಸಿತು.* ಶುಕ್ರವಾರ(ಜುಲೈ 11) ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಇಟಲಿ 20 ಓವರ್ಗಳಲ್ಲಿ 134 ರನ್ ಗಳಿಸಿತು. ನೆದರ್ಲೆಂಡ್ಸ್ 16.2 ಓವರ್ಗಳಲ್ಲಿ 1 ವಿಕೆಟ್ ಕಳೆದು ಗೆಲುವು ಸಾಧಿಸಿ ಅಗ್ರಸ್ಥಾನ ಗಳಿಸಿತು. ಜೆರ್ಸಿ ಕೂಡ 5 ಅಂಕ ಗಳಿಸಿದ್ದರೂ ರನ್ ರೇಟ್ನಲ್ಲಿ ಹಿಂದಾದುದರಿಂದ ಇಟಲಿಗೆ ಅವಕಾಶ ದೊರಕಿತು.* 2026 ರ ಟಿ20 ವಿಶ್ವಕಪ್ಗೆ ಈಗಾಗಲೇ 15 ತಂಡಗಳು ಅರ್ಹತೆ ಪಡೆದು ಮುನ್ನಡೆಯಿವೆ. ಅವುಗಳೆಂದರೆ: ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ, ಐರ್ಲೆಂಡ್, ಯುಎಸ್ಎ, ಕೆನಡಾ, ನೆದರ್ಲೆಂಡ್ಸ್ ಮತ್ತು ಇಟಲಿ.* ಇನ್ನೂ ಮೂರು ತಂಡಗಳು ಏಷ್ಯಾ ಹಾಗೂ ಈಸ್ಟ್ ಏಷಿಯಾ ಪೆಸಿಫಿಕ್ (EAP) ಅರ್ಹತಾ ಪಂದ್ಯದಿಂದ ಹಾಗೂ ಎರಡು ತಂಡಗಳು ಆಫ್ರಿಕಾ ಅರ್ಹತಾ ಪಂದ್ಯದಿಂದ ಆಯ್ಕೆಯಾಗಲಿವೆ.