Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
T 20 world cup 2026 : ನ್ಯೂಜಿಲೆಂಡ್ ವಿರುದ್ದ 96 ರನ್ ಗಳ ಬೃಹತ್ ಜಯ: 3ನೇ ಟಿ20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಭಾರತ
Authored by:
Yallamma G
Date:
9 ಮಾರ್ಚ್ 2026
➤ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಆತಿಥೇಯ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 96 ರನ್ ಭರ್ಜರಿ ಜಯ ಸಾಧಿಸಿ, ಟಿ
20 ವಿಶ್ವಕಪ್ ಟ್ರೋಫಿಯನ್ನು ಮೂರನೇ ಬಾರಿಗೆ ಎತ್ತಿಹಿಡಿಯಿತು.
ಇದು ಭಾರತ ತಂಡಕ್ಕೆ ಸತತ ಎರಡನೇ ಟಿ20 ವಿಶ್ವಕಪ್ ಆಗಿದೆ.
➤ ಭಾರತವು 2024 ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಜಯಿಸಿದ ನಂತರ, ಈ ಬಾರಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಫೈನಲ್ನಲ್ಲಿ ಭಾರತ ತಂಡದ ವೈಭವವು ಪ್ರೇಕ್ಷಕರ ಮನಸ್ಸನ್ನು ರಂಜಿಸಿದೆ.
➤ ಈ ಗೆಲುವು ಭಾರತದ ತಂಡಕ್ಕೆ ಅನನ್ಯ ದಾಖಲೆ ನೀಡಿದೆ:
- ಟಿ20 ವಿಶ್ವಕಪ್ ಇತಿಹಾಸದಲ್ಲಿ ಹಾಲಿ ಚಾಂಪಿಯನ್ ತಂಡವು ಪ್ರಶಸ್ತಿಯನ್ನು ಉಳಿಸಿಕೊಂಡಿರುವ ಮೊದಲ ತಂಡ ಭಾರತ.
- ಆತಿಥೇಯ ತಂಡವಾಗಿಯೂ ಭಾರತ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಮೊದಲ ದೇಶ.
- ನ್ಯೂಜಿಲೆಂಡ್ ವಿರುದ್ಧ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ಮೊದಲ ಬಾರಿಗೆ ಜಯ ಸಾಧಿಸಿದೆ, ಹಳೆಯ ಸೋಲು ಸರಣಿಯನ್ನು ಮುರಿದುಕೊಂಡಿತು.
- ಇದುವರೆಗೆ ನ್ಯೂಜಿಲೆಂಡ್ 2007, 2016 ಮತ್ತು 2021 ರ ಟಿ20 ವಿಶ್ವಕಪ್ ಫೈನಲ್ಗಳಲ್ಲಿ ಭಾರತವನ್ನು ಸೋಲಿಸಿದ್ದು, 2026 ರ ಫೈನಲ್ನಲ್ಲಿ ಕಿವೀಸ್ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ. ಭಾರತ ತಂಡದ ಈ ಗೆಲುವು ಕ್ರಿಕೆಟ್ ಪ್ರೇಕ್ಷಕರಿಗೆ ಮತ್ತೊಂದು ಮಹತ್ವಪೂರ್ಣ ಕ್ಷಣವಾಗಿದೆ.
- ಭಾರತವು ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಎರಡು ಬಾರಿ ಜಯಿಸುವ ಸಾಧನೆಯನ್ನು ಮಾಡಿದ ಮೂಲಕ, ಕ್ರಿಕೆಟ್ ಲೋಕದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.
➤ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮೂರನೇ ಅತಿ ಹೆಚ್ಚು ರನ್ ಗಳಿಸಿತು. ಸ್ಯಾಮ್ಸನ್ 46 ಎಸೆತಗಳಲ್ಲಿ 89 ರನ್, ಅಭಿಷೇಕ್ 21 ಎಸೆತಗಳಲ್ಲಿ 52 ರನ್ ಮತ್ತು ಇಶಾನ್ ಕಿಶನ್ 25 ಎಸೆತಗಳಲ್ಲಿ 54 ರನ್ ಗಳಿಸಿದರು.
➤
ಪ್ರಸಕ್ತ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದವರು
383 ಸಾಹಿಬ್ಬಾದಾ ಫರ್ಹಾನ್ (ಪಾಕಿಸ್ತಾನ)
326 ಟಿಮ್ ಸಿಫರ್ಟ್ (ನ್ಯೂಜಿಲೆಂಡ್)
321 ಸಂಜು ಸ್ಯಾಟ್ಸನ್ (ಭಾರತ)
➤
ಪ್ರಸಕ್ತ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಗಳಿಸಿದವರು
14 ಜಸ್ ಪ್ರಿತ್ ಬುಮ್ರಾ (ಭಾರತ)
14 ವರುಣ್ ಚಕ್ರವರ್ತಿ (ಭಾರತ)
13 ಶ್ಯಾಡ್ಲಿವ್ಯಾನ್ (ಅಮೆರಿಕ)
➤
ಭಾರತ ಪರ ಶ್ರೇಷ್ಠ ಪ್ರದರ್ಶನ ನೀಡಿದವರು
ಸಂಜು ಸ್ಯಾಟ್ಸನ್ : 321 ರನ್
ಇಶಾನ್ ಕಿಶಾನ್ : 317 ರನ್
ಸೂರ್ಯಕುಮಾರ್ : 242 ರನ್
ಜಸ್ಪ್ರಿತ್ ಬುಮ್ರಾ : 14 ವಿಕೆಟ್
ವರುಣ್ ಚಕ್ರವರ್ತಿ : 14 ವಿಕೆಟ್
ಅಕ್ಷರ್ ಪಟೇಲ್ : 11 ವಿಕೆಟ್
➤
Take Quiz
Loading...