* ವಿಶ್ವ ಮತ್ತು ಒಲಿಂಪಿಕ್ ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಗುರುವಾರ (ಆಗಸ್ಟ್ 28, 2025) ರಂದು ಸ್ವಿಟ್ಜರ್ಲ್ಯಾಂಡ್ನ ಜ್ಯೂರಿಚ್ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ನಲ್ಲಿ ಎರಡನೇ ಸ್ಥಾನ ಪಡೆದರು, ಇದು ಅಂತರರಾಷ್ಟ್ರೀಯ ಜಾವೆಲಿನ್ ಸ್ಪರ್ಧೆಗಳಲ್ಲಿ ಸತತ 26 ನೇ ಟಾಪ್-ಟು ಫಿನಿಶ್ ಆಗಿದೆ. * ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಡೈಮಂಡ್ ಲೀಗ್ ಫೈನಲ್ಸ್ನಲ್ಲಿ ಸತತ ಮೂರನೇ ಬಾರಿಗೆ ರನ್ನರ್ ಅಪ್ ಸ್ಥಾನ ಪಡೆದರು.* ಜ್ಯೂರಿಚ್ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು 85.01 ಮೀಟರ್ಗಳ ಅತ್ಯುತ್ತಮ ಎಸೆತದೊಂದಿಗೆ 84.95 ಮೀಟರ್ಗಳ ತ್ರಿನಿಡಾಡ್ ಮತ್ತು ಟೊಬಾಗೊದ ಕೆಶೋರ್ನ್ ವಾಲ್ಕಾಟ್ ಎಸೆತವನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದಿದ್ದಾರೆ. ವೆಬರ್ ಅವರು 91.57 ಮೀಟರ್ಗಳ ವೈಯಕ್ತಿಕ ಉತ್ತಮ ಎಸೆತದೊಂದಿಗೆ ಮೊದಲ ಸ್ಥಾನ ಪಡೆದರು.* ಹಾಲಿ ಚಾಂಪಿಯನ್ ಚೋಪ್ರಾ 84.35 ಮೀಟರ್ ಎಸೆದು ಆರಂಭಿಕ ಸಾಧನೆ ಮಾಡಿದರು, ನಂತರ ಎರಡನೇ ಪ್ರಯತ್ನದಲ್ಲಿ ಸಾಧಾರಣ 84 ಮೀಟರ್ ಎಸೆದರು. ನಂತರ ಅವರು ಸತತ ಮೂರು ಫೌಲ್ಗಳನ್ನು ದಾಖಲಿಸಿದರು. * ಚೋಪ್ರಾ ಅವರ ಅಂತಿಮ ಮತ್ತು ಆರನೇ ಪ್ರಯತ್ನದಲ್ಲಿ, ಚೋಪ್ರಾ 85.10 ಮೀಟರ್ ಎಸೆದು ರನ್ನರ್ ಅಪ್ ಸ್ಥಾನವನ್ನು ಪಡೆದರು. ಪ್ರತಿಯೊಬ್ಬ ಜಾವೆಲಿನ್ ಎಸೆತಗಾರ ಆರು ಪ್ರಯತ್ನಗಳನ್ನು ಮಾಡಿದ್ದಾರೆ.* 2012 ರ ಒಲಿಂಪಿಕ್ ಚಾಂಪಿಯನ್ ಟ್ರಿನಿಡಾಡ್ ಮತ್ತು ಟೊಬಾಗೊದ ಕೆಶೋರ್ನ್ ವಾಲ್ಕಾಟ್ 84.95 ಮೀಟರ್ ಎಸೆದು ಮೂರನೇ ಸ್ಥಾನ ಪಡೆದರು. ಹಾಗೂ ಹಾಲಿ ಚಾಂಪಿಯನ್ ಗ್ರೆನಡಾದ ಆಂಡರ್ಸನ್ ಪೀಟರ್ಸ್ 82.06 ಮೀ.ಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು.* ಡೈಮಂಡ್ ಲೀಗ್ ಫೈನಲ್ ಫಲಿತಾಂಶ :1. ಜೂಲಿಯನ್ ವೆಬರ್, 91.51 ಮೀ.2. ನೀರಜ್ ಚೋಪ್ರಾ, 85.01 ಮೀ.3. ಕೆಶೋರ್ನ್ ವಾಲ್ಕಾಟ್, 84.95 ಮೀ.4. ಆಂಡರ್ಸನ್ ಪೀಟರ್ಸ್, 82.06 ಮೀ.5. ಜೂಲಿಯಸ್ ಯೆಗೊ, 82.01 ಮೀ.6. ಆಡ್ರಿಯನ್ ಮರ್ಡೇರ್, 81.81 ಮೀ.7. ಸೈಮನ್ ವೈಲ್ಯಾಂಡ್, 81.29 ಮೀ.