* ಅಭಿವೃದ್ಧಿ ಪಡಿಸಲಾಗಿರುವ ದೇಶದ ಸ್ಥಳೀಯ ವಿಮಾನವಾಹಕ ನೌಕೆ INS ವಿಕ್ರಾಂತ್ ಪಶ್ಚಿಮ ನೌಕಾ ನೌಕಾಪಡೆಗೆ ಸೇರ್ಪಡೆಗೊಂಡಿದ್ದು, ಅರಬ್ಬಿ ಸಮುದ್ರದಲ್ಲಿ ಕಡಲ ಶಕ್ತಿಯನ್ನು ಗಮನಾರ್ಹವಾಗಿ ವರ್ಧಿಸುತ್ತದೆ ಎಂದು ಭಾರತೀಯ ನೌಕಾಪಡೆ ಸೆಪ್ಟೆಂಬರ್ 18 ತಿಳಿಸಿದೆ.* ಈ ಸೇರ್ಪಡೆಯು ನೌಕಾಪಡೆ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಿದೆ. ವೆಸ್ಟರ್ನ್ ಫೀಟ್ 'ಮುಂಬೈನಲ್ಲಿ ಕೇಂದ್ರ ಕಚೇರಿಯುಳ್ಳ ಪಶ್ಚಿಮ ನೌಕಾ ಕಮಾಂಡ್‌ನ (ಡಬ್ಲ್ಯುಎನ್‌ಸಿ) ಭಾಗವಾಗಿದೆ.* ಭಾರತೀಯ ನೌಕಾಪಡೆಯು ತನ್ನ ಪಶ್ಚಿಮ ಮುಂಭಾಗದಲ್ಲಿ INS ವಿಕ್ರಾಂತ್ ಮತ್ತು INS ವಿಕ್ರಮಾದಿತ್ಯ ಎರಡು ವಿಮಾನವಾಹಕ ನೌಕೆಗಳನ್ನು ಹೊಂದಿದೆ.* 'ಐಎನ್‌ಎಸ್ ವಿಕ್ರಮಾದಿತ್ಯ ನಿರ್ವಹಣೆಯ ತಂಡದ ಮುಂದಾಳತ್ವದಲ್ಲಿ ಐಎನ್ಎಸ್ ವಿಕ್ರಾಂತ್ ನೌಕಾವಾಹಕದ ಸೇರ್ಪಡೆಯಾಯಿತು. ಇದನ್ನು ಬಳಸಿಕೊಂಡು ಅರಬ್ಬಿ ಸಮುದ್ರದಲ್ಲಿ ಜೋಡಿ ಯುದ್ಧ ವಿಮಾನಗಳ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು' ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.* ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್ ಎರಡೂ ನೌಕಾವಾಹಕಗಳು ಈ ಅರಬ್ಬಿ ಸಮುದ್ರದಲ್ಲಿ ನೆಲೆಗೊಂಡಿವೆ.* ಕರ್ನಾಟಕದ ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆ ವ್ಯಾಪ್ತಿಗೆ ಬರಲಿವೆ. ಪ್ರಧಾನಿ ನರೇಂದ್ರ ಮೋದಿ ಸೆ. 2, 2022ರಂದು 'ಐಎನ್‌ಎಸ್ ವಿಕ್ರಾಂತ್' ಕಾರ್ಯಾಚರಣೆಗೊಳಿಸಿದ್ದರು.* ನೌಕಾಪಡೆಯ ಯುದ್ಧವಾಹಕ ವಿನ್ಯಾಸ ಮಂಡಳಿ (ಡಬ್ಲ್ಯುಡಿಬಿ) ವಿನ್ಯಾಸಗೊಳಿಸಿದೆ., ಕೊಚ್ಚಿಯ ಸಿಎಸ್ಎಲ್ ಸಂಸ್ಥೆ ನಿರ್ಮಾಣ ಮಾಡಿದೆ. 'ಐಎನ್‌ಎಸ್ ವಿಶ್ರಾಂತಿ" ಒಟ್ಟು 262.5 ಮೀಟರ್ ಉದ್ದ, 61.6 ಮೀಟರ್ ಅಗಲವಿದೆ. 43 ಸಾವಿರ ಟನ್ ತೂಕ ಹೊರುವ ಸಾಮರ್ಥ್ಯವಿದೆ. 2,200 ಕಂಪಾರ್ಟ್ ಮೆಂಟ್‌ಗಳಿದ್ದು, 1,600 ಸಿಬ್ಬಂದಿಗೆ ಬಳಸಲು ರೂಪಿಸಲಾಗಿದೆ.