* ಕರ್ನಾಟಕ ಪರಿಸರ ಸಚಿವ ಈಶ್ವರ್ ಖಂಡ್ರೆ ಬುಧವಾರ(ಫೆ.05) ಮಾನವ-ಆನೆ ಸಂಘರ್ಷ ತಗ್ಗಿಸಲು ಅಭಿವೃದ್ಧಿಪಡಿಸಿದ ಜಿಎಸ್ಎಂ ಆಧಾರಿತ ಆನೆ ರೇಡಿಯೋ ಕಾಲರ್-ಕೆಪಿ ಟ್ರ್ಯಾಕರ್ ಅನ್ನು ಬಿಡುಗಡೆ ಮಾಡಿದರು.* ಈ ಸಾಧನವನ್ನು ಅರಣ್ಯ ಇಲಾಖೆ ಇನ್ಫಿಕ್ಷನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ.* ಹೊಸದಾಗಿ ಪ್ರಾರಂಭಿಸಿದ ಕರ್ನಾಟಕ ಉತ್ಪಾದಿತ ವೆಚ್ಚ-ಪರಿಣಾಮಕಾರಿ ರೇಡಿಯೋ ಕಾಲರ್ಗಳು ತ್ವರಿತ ನಿಯೋಜನೆಗೆ ಲಭ್ಯವಾಗಿವೆ. ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದುದರಿಂದ ಅವು ಕಡಿಮೆ ಪರಿಸರ ಪರಿಣಾಮವನ್ನು ಹೊಂದಿವೆ.* ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಆನೆಗಳ ಹಾವಳಿಯನ್ನು ತಡೆಯಲು, ಆನೆಗಳ ಹಿಂಡನ್ನು ಮುನ್ನಡೆಸುವ ಹೆಣ್ಣು ಆನೆಗಳಿಗೆ ಸ್ಥಳೀಯವಾಗಿ ತಯಾರಿಸಿದ ರೇಡಿಯೋ ಕಾಲರ್ಗಳನ್ನು ಅಳವಡಿಸಿ ಅವುಗಳ ಚಲನವಲನಗಳನ್ನು ತಕ್ಷಣವೇ ಸ್ಥಳೀಯರಿಗೆ ತಿಳಿಸುವ ಉಪಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.* ಕರ್ನಾಟಕದಲ್ಲಿ 6,395 ಆನೆಗಳಿವೆ, ಕರ್ನಾಟಕವು ದೇಶದಲ್ಲಿ ಅತಿ ಹೆಚ್ಚು ಆನೆಗಳ ಸಂಖ್ಯೆಯನ್ನು ಹೊಂದಿದೆ ಆದರೆ ಅರಣ್ಯ ವಿಸ್ತರಣೆ ಕಡಿಮೆಯಾಗಿರುವುದರಿಂದ ಮಾನವ-ಆನೆ ಸಂಘರ್ಷ ಹೆಚ್ಚಾಗಿದೆ.* ಈ ಸಮಸ್ಯೆ ನಿರ್ವಹಿಸಲು ಬಂಡೀಪುರ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶಗಳ ಅಧಿಕಾರಿಗಳಿಗೆ ರೇಡಿಯೋ ಕಾಲರ್ಗಳನ್ನು ಹಸ್ತಾಂತರಿಸಲಾಗಿದೆ.* ಒಂದೊಮ್ಮೆ ನಾಡಿಗೆ ಪ್ರವೇಶಿಸಿದರೆ, ಬೆಳೆಗಳ ಹತ್ತಿರ ಬಂದರೆ ಸಾರ್ವಜನಿಕರಿಗೆ ಮುನ್ಸೂಚನೆ ನೀಡಲಾಗುವುದು ಆ ಮೂಲಕ ಆಗಬಹುದಾದ ಅನಾಹುತ ತಪ್ಪಿಸಲಾಗುವುದು.* ದಕ್ಷಿಣ ಅಫ್ರಿಕಾ ಹಾಗೂ ಜರ್ಮನಿಯಿಂದ ಆಮದು ಮಾಡಿಕೊಳ್ಳುತ್ತಿದ್ದ ಆನೆ ರೇಡಿಯೋ ಕಾಲರ್ಗಳಿಗೆ ಹೋಲಿಸಿದರೆ ಸ್ಥಳೀಯ ಆನೆ ಕಾಲರ್ಗಳು ಗುಣಮಟ್ಟದಿಂದ ಕೂಡಿದ್ದು, ಕೈಗೆಟುವ ದರವಿದೆ. 1.80 ಲಕ್ಷ ರೂ. ದರದಲ್ಲಿ ಒಂದು ಆನೆ ಕಾಲರ್ ತಯಾರಾದರೆ ವಿದೇಶಿ ಆನೆ ಕಾಲರ್ 6.50 ಲಕ್ಷ ರೂ. ತಗುಲುತ್ತಿತ್ತು.* ಸ್ಥಳೀಯ ಆನೆ ಕಾಲರ್ ಬ್ಯಾಟರಿ ದೀರ್ಘಕಾಲದವರೆಗೆ ಬಾಳಿಕೆ ಬರಲಿದೆ. ಆಮದು ರೇಡಿಯೋ ಕಾಲರ್ಗಳ ತೂಕ 16 ರಿಂದ 17 ಕೆ.ಜಿ ಇದ್ದರೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕಾಲರ್ ಕೇವಲ 7 ಕೆ.ಜಿ. ತೂಕವಿದ್ದು, ಇದು ಹಗುರವಾಗಿದೆ.