Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
💧 ಸ್ವಾನ್ ಸದಸ್ಯತ್ವದಲ್ಲಿ BWSSBಗೆ ದೇಶದಲ್ಲೇ ಪ್ರಥಮ ಸ್ಥಾನ
15 ಅಕ್ಟೋಬರ್ 2025
* ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (
BWSSB
) ಪ್ರಗತಿಯ ಪಥದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. BWSSBಯು ಜಾಗತಿಕ ಸ್ಮಾರ್ಟ್ ವಾಟರ್ ನೆಟ್ವರ್ಕ್ ಫೋರಂನ (
SWAN
) ಸದಸ್ಯತ್ವವನ್ನು ಪಡೆದ
ಭಾರತದ ಮೊದಲ ನೀರು ಸರಬರಾಜು ಮಂಡಳಿ
ಯಾಗಿ ಹೊರಹೊಮ್ಮುವ ಮೂಲಕ ದೇಶಕ್ಕೇ ಹೆಮ್ಮೆ ತಂದಿದೆ.
* SWAN (Smart Water Network Forum) ಒಂದು
ಅಂತರಾಷ್ಟ್ರೀಯ ವೇದಿಕೆ
ಯಾಗಿದೆ. ಇದರ ಪ್ರಮುಖ ಗುರಿ ಜಲ ವಲಯದಲ್ಲಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆಯನ್ನು ಪ್ರೋತ್ಸಾಹಿಸುವುದು ಮತ್ತು ಆ ಮೂಲಕ ನೀರಿನ ನಿರ್ವಹಣೆ ಹಾಗೂ ವಿತರಣೆಯಲ್ಲಿ
ಡಿಜಿಟಲ್ ಪರಿವರ್ತನೆ
ಯನ್ನು (Digital Transformation) ತರುವುದು. BWSSB ಯು ಈ ಪ್ರಮುಖ ಸಂಸ್ಥೆಯ ಸದಸ್ಯತ್ವ ಪಡೆಯುವುದರಿಂದ, ಜಲ ನಿರ್ವಹಣೆಯಲ್ಲಿ ಜಾಗತಿಕ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಅವಕಾಶ ದೊರೆಯುತ್ತದೆ.
* ಈ ಐತಿಹಾಸಿಕ ಸ್ವಾನ್ ಸದಸ್ಯತ್ವವನ್ನು ದಕ್ಷಿಣ ಏಷ್ಯಾದ ಅತಿದೊಡ್ಡ ಮತ್ತು ಪ್ರಮುಖ ಪರಿಸರ ತಂತ್ರಜ್ಞಾನ ಸಂಬಂಧಿತ ಕಾರ್ಯಕ್ರಮವಾದ
ಇನ್ಫ್ರಾಟೆಕ್ ಇಂಡಿಯಾ 2025
ರ ಸಂದರ್ಭದಲ್ಲಿ ಘೋಷಿಸಲಾಗಿದೆ.
* ಈ ವೇದಿಕೆಯಲ್ಲಿ
ಡಾ. ವಿ. ರಾಮು ಪ್ರಸಾದ್ ಮನೋಹರ್
(ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷರು),
ರೂಪಾ ಮಿಶ್ರಾ
(ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ),ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ (NMCG) ಅಭಿಯಾನದ ಮಹಾನಿರ್ದೇಶಕರು(
ರಾಜೀವ್ ಕುಮಾರ್ ಮಿತ್ತಲ್
) ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.
* BWSSB ಯು SWAN ಸದಸ್ಯತ್ವ ಪಡೆಯುವುದರಿಂದ ಬೆಂಗಳೂರಿನ ಜಲ ನಿರ್ವಹಣೆ ವ್ಯವಸ್ಥೆಯಲ್ಲಿ ಈ ಕೆಳಗಿನ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಬಹುದು:
# ಸುಧಾರಿತ ನೀರು ನಿರ್ವಹಣೆ: ಸ್ಮಾರ್ಟ್ ತಂತ್ರಜ್ಞಾನಗಳನ್ನು ಬಳಸಿಕೊಂಡು ನೀರಿನ ಸೋರಿಕೆ (Non-Revenue Water) ಕಡಿಮೆ ಮಾಡುವುದು.
# ಗುಣಮಟ್ಟದ ಸೇವೆ: ನಾಗರಿಕರಿಗೆ ಉತ್ತಮ ಗುಣಮಟ್ಟದ ಮತ್ತು ನಿರಂತರವಾದ ನೀರು ಪೂರೈಕೆಯನ್ನು ಖಚಿತಪಡಿಸುವುದು.
# ಅಂತರಾಷ್ಟ್ರೀಯ ಸಹಯೋಗ: ಜಲ ವಲಯದಲ್ಲಿ ಹೊಸ ತಂತ್ರಜ್ಞಾನಗಳು, ಅತ್ಯುತ್ತಮ ಅಭ್ಯಾಸಗಳು ಮತ್ತು ಜಾಗತಿಕ ಪರಿಹಾರಗಳನ್ನು ಅಳವಡಿಸಿಕೊಳ್ಳಲು SWAN ನೆಟ್ವರ್ಕ್ನೊಂದಿಗೆ ಸಹಕರಿಸುವುದು.
Take Quiz
Loading...