Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಸ್ವಾಮಿ ವಿವೇಕಾನಂದರ 164ನೇ ಜನ್ಮದಿನ: ಜನವರಿ 12ರಂದು ದೇಶಾದ್ಯಂತ ‘ರನ್ ಫಾರ್ ಸ್ವದೇಶಿ’ ಯುವ ಜಾಗೃತಿ ಓಟ
30 ಡಿಸೆಂಬರ್ 2025
* ಭಾರತದ ಮಹಾನ್ ದಾರ್ಶನಿಕ ಮತ್ತು ಯುವಶಕ್ತಿಯ ಪ್ರೇರಕ ಚಿಂತಕ
ಸ್ವಾಮಿ ವಿವೇಕಾನಂದರ 164ನೇ ಜನ್ಮದಿನ
ವನ್ನು (Vivekananda Jayanti) ಸ್ಮರಿಸಲು ಕೇಂದ್ರ ಸರ್ಕಾರವು ಈ ಬಾರಿ ವಿಶಿಷ್ಟ ಸಿದ್ಧತೆ ನಡೆಸಿದೆ. 2026ರ ಜನವರಿ 12ರಂದು ದೇಶಾದ್ಯಂತ
‘ರನ್ ಫಾರ್ ಸ್ವದೇಶಿ’
ಎಂಬ ರಾಷ್ಟ್ರವ್ಯಾಪಿ ಯುವ ಜಾಗೃತಿ ಓಟವನ್ನು ಆಯೋಜಿಸುವಂತೆ ಶಿಕ್ಷಣ ಸಚಿವಾಲಯವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
* ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ದೇಶಪ್ರೇಮ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ
2, 3
ಹಾಗೂ
5 ಕಿಲೋಮೀಟರ್ಗಳ ಓಟವನ್ನು
ಆಯೋಜಿಸಲಾಗುತ್ತದೆ. ಇದರ ಜೊತೆಗೆ ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳನ್ನು ಸಾರುವ ಪ್ರೇರಣಾದಾಯಕ
ಭಾಷಣಗಳು, ಯುವಕರಿಗೆ ಉತ್ತೇಜನ ನೀಡುವ ಸಂವಾದಗಳು
ಹಾಗೂ ಭಾಗವಹಿಸಿದವರಿಗೆ ಪ್ರಮಾಣಪತ್ರ ವಿತರಣೆಯಂತಹ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.
* ಈ
‘ರನ್ ಫಾರ್ ಸ್ವದೇಶಿ’
ಕಾರ್ಯಕ್ರಮವನ್ನು ಶಿಕ್ಷಣ ಸಂಸ್ಥೆಗಳು, ಎನ್ಸಿಸಿ (NCC), ಎನ್ಎಸ್ಎಸ್ (NSS), ಯುವ ಕ್ಲಬ್ಗಳು ಸೇರಿದಂತೆ ವಿವಿಧ ಸಂಘಟನೆಗಳು ಸಂಯುಕ್ತವಾಗಿ ಆಯೋಜಿಸಬಹುದು. ಕಾಲೇಜು ಅವರಣಗಳು, ಶಾಲಾ ಮೈದಾನಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಜನವರಿ 12ರಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ
ವಿಶ್ವವಿದ್ಯಾಲಯ ಅನುದಾನ ಆಯೋಗ (UGC)
ಸೂಚಿಸಿದೆ.
* ಸ್ವಾಮಿ ವಿವೇಕಾನಂದರ
“ಯುವಶಕ್ತಿಯೇ ರಾಷ್ಟ್ರದ ಭವಿಷ್ಯ”
ಎಂಬ ಸಂದೇಶವನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸುವ ಈ ಕಾರ್ಯಕ್ರಮವು ಯುವಜನರನ್ನು ಸ್ವದೇಶಿ ಚಿಂತನೆ ಹಾಗೂ ರಾಷ್ಟ್ರ ನಿರ್ಮಾಣದ ದಾರಿಯತ್ತ ಪ್ರೇರೇಪಿಸುವ ಮಹತ್ವದ ಹೆಜ್ಜೆಯಾಗಿದೆ.
Take Quiz
Loading...