* ಭಾರತ ಕೇವಲ ದೇಶೀಯ ಮಟ್ಟದಲ್ಲಿ ಮಾತ್ರವಲ್ಲ, ಜಾಗತಿಕ ವೇದಿಕೆಯಲ್ಲಿಯೂ ತನ್ನ ಪ್ರಭಾವವನ್ನೂ ವಿಶಿಷ್ಟತೆ ಸಾಧಿಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರಂಭಿಸಿದ ಅಂತಾರಾಷ್ಟ್ರೀಯ ಸೌರ ಒಕ್ಕೂಟ ಈಗ 100ಕ್ಕಿಂತ ಹೆಚ್ಚು ರಾಷ್ಟ್ರಗಳನ್ನು ಒಗ್ಗೂಡಿಸಿದೆ.* ‘ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್’ ಎಂಬ ಅವರ ದೃಷ್ಟಿಕೋಣವು ಸೌರಶಕ್ತಿಯ ಮೂಲಕ ರಾಷ್ಟ್ರಗಳನ್ನು ಹೇಗೆ ಏಕವ್ಯವಸ್ಥೆಯಡಿಯಲ್ಲಿ ಸೇರಿಸಬಹುದೆಂಬುದನ್ನು ಪ್ರಪಂಚಕ್ಕೆ ತೋರಿಸುತ್ತಿದೆ.* ಈ ಒಕ್ಕೂಟವು ಭಾರತದಲ್ಲಿಯೇ ಪ್ರಧಾನ ಕಚೇರಿಯನ್ನು ಹೊಂದಿರುವ ಪ್ರಥಮ ಅಂತಾರಾಷ್ಟ್ರೀಯ ಮತ್ತು ಅಂತರ್ ಸರ್ಕಾರ ಸಂಸ್ಥೆಯಾಗಿದೆ.* 2025ರ ಮೇ 24ರಂದು ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ ಸಭೆಯಲ್ಲಿ ಪ್ರಧಾನಮಂತ್ರಿ ಮೋದಿ ಅವರು ಶುದ್ಧ ಇಂಧನ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಶ್ಲೇಷಣಾತ್ಮಕ ಚರ್ಚೆ ನಡೆಸಿದರು.* ಹಸಿರು ಭವಿಷ್ಯಕ್ಕೆ ಅಗತ್ಯವಿರುವ ಪರಿಣತ ಶಕ್ತಿ ಸಿಬ್ಬಂದಿಯನ್ನು ತಯಾರಿಸುವ ಉದ್ದೇಶದಿಂದ ‘ಸೂರ್ಯಮಿತ್ರ’, ‘ವಾಯುಮಿತ್ರ’, ಹಾಗೂ ‘ಜಲ್ಊರ್ಜಾ ಮಿತ್ರ’ ಎಂಬ ಮಹತ್ವದ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತುತಪಡಿಸಿದರು.* ಪ್ರಧಾನಿ ಮೋದಿ ಅವರು 2030ರ ಒಳಗೆ 500 ಗಿಗಾವ್ಯಾಟ್ ಪಳೆಯುಳಿಕೆ ರಹಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸಾಧಿಸುವ ಗುರಿಯನ್ನು ಹೊಂದಿದ್ದಾರೆ.* ಪ್ರಸ್ತುತ ಭಾರತ 228 ಗಿಗಾವ್ಯಾಟ್ ಸಾಮರ್ಥ್ಯ ಹೊಂದಿದ್ದು, 176 ಗಿಗಾವ್ಯಾಟ್ ಯೋಜನೆಗಳ ನಿರ್ಮಾಣ ನಡೆಯುತ್ತಿದೆ ಮತ್ತು 72 ಗಿಗಾವ್ಯಾಟ್ ಯೋಜನೆಗಳು ಟೆಂಡರ್ ಹಂತದಲ್ಲಿವೆ.