Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಸೂರ್ಯಕಿರಣ XIX – 2025: ಭಾರತ–ನೇಪಾಳ ಜಂಟಿ ಸೇನಾ ಸಮರಾಭ್ಯಾಸ
29 ನವೆಂಬರ್ 2025
* ಭಾರತ ಮತ್ತು ನೇಪಾಳ ದೇಶಗಳ ನಡುವೆ ನಡೆಯುವ ದ್ವೈವಾರ್ಷಿಕ ಸೇನಾ ಸಹಕಾರ ಕಾರ್ಯಕ್ರಮವಾದ
“ಸೂರ್ಯಕಿರಣ”
ಜಂಟಿ ಸೇನಾ ಸಮರಾಭ್ಯಾಸದ
19ನೇ ಆವೃತ್ತಿ — “ಸೂರ್ಯಕಿರಣ XIX – 2025”
ನವೆಂಬರ್ 25 ರಿಂದ ಉತ್ತರಾಖಂಡದ
ಪಿಥೋರಗಢ
ಪಟ್ಟಣದಲ್ಲಿ ಪ್ರಾರಂಭಗೊಂಡಿದೆ. ಈ ಮಹತ್ವದ ಅಭ್ಯಾಸವು ಡಿಸೆಂಬರ್ 8, 2025 ರಂದು ಕೊನೆಗೊಳ್ಳಲಿದೆ.
* ಸೂರ್ಯಕಿರಣ ಸಮರಾಭ್ಯಾಸವು ಭಾರತ ಮತ್ತು ನೇಪಾಳದ ಮಧ್ಯೆ ದೀರ್ಘಕಾಲದಿಂದಲೂ ಇರುವ
ಸೈನಿಕ ಸಹಕಾರ, ಪರಸ್ಪರ ಬಲವರ್ಧನೆ, ಗಡಿ ಭದ್ರತೆ, ಮತ್ತು ಸ್ನೇಹಭಾವ
ದ ಪ್ರತೀಕವಾಗಿದೆ. ಇವು ಎರಡೂ ರಾಷ್ಟ್ರಗಳ ನಡುವಿನ ನೈಸರ್ಗಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಬಂಧಗಳನ್ನು ಮತ್ತಷ್ಟು ಗಾಢಗೊಳಿಸುತ್ತದೆ.
* ಭಾರತ ಮತ್ತು ನೇಪಾಳದ ಸೇನೆಗಳು ಪರಂಪರೆಯಿಂದಲೂ ಪರಸ್ಪರ ಆಪ್ತ ಸಂಬಂಧ ಉಳಿಸಿಕೊಂಡಿವೆ. ಇಬ್ಬರ ಮಧ್ಯೆಯೂ ಗೋರಖಾ ಸೈನಿಕ ಪರಂಪರೆ, ಹಿಮಾಲಯ ಪ್ರದೇಶದ ರಕ್ಷಣಾತ್ಮಕ ಮಹತ್ವ ಮತ್ತು ಪುರಾತನ ಸಾಂಸ್ಕೃತಿಕ ಬಂಧಗಳು ಇದ್ದವು. ಸೂರ್ಯಕಿರಣ ಸಮರಾಭ್ಯಾಸವು ಈ ಸ್ನೇಹವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ರಕ್ಷಣಾ ಸಹಕಾರವನ್ನು ಹೊಸ ಎತ್ತರಗಳತ್ತ ಕೊಂಡೊಯ್ಯುತ್ತದೆ.
* ಈ ಅಭ್ಯಾಸದಲ್ಲಿ ಎರಡೂ ದೇಶಗಳ ಸೈನಿಕರು: ಕಠಿಣ ಪರ್ವತ ಪ್ರದೇಶಗಳಲ್ಲಿ ಯುದ್ಧ ಕಾರ್ಯಾಚರಣೆಗಳ ತರಬೇತಿ, ಕಾಡು-ಪರ್ವತ ಪ್ರದೇಶಗಳಲ್ಲಿ ಸಣ್ಣ ಗುಂಪುಗಳೊಂದಿಗೆ ನಡೆಸುವ
Anti-terror drills
ಶಸ್ತ್ರಾಸ್ತ್ರ ಬಳಕೆ, ಮಾಹಿತಿಯ ವಿನಿಮಯ ಮತ್ತು ಸಂಯುಕ್ತ ಯೋಜನೆ, ವಿಪತ್ತು ಸಂದರ್ಭಗಳಲ್ಲಿ ಸಾರ್ವಜನಿಕ ರಕ್ಷಣಾ ಕಾರ್ಯಾಚರಣೆ ಯುನೈಟೆಡ್ ನೆಷನ್ಸ್ ಶಾಂತಿಸೇನೆ ಕಾರ್ಯಾಚರಣೆ (UN Peacekeeping) ಮಾದರಿ ತರಬೇತಿ ಇವುಗಳನ್ನು ಸಂಯುಕ್ತವಾಗಿ ನಡೆಸುತ್ತಿದ್ದಾರೆ.
*
ಸಮರಾಭ್ಯಾಸದ ಪ್ರಮುಖ ಉದ್ದೇಶಗಳು:
-
ಎರಡೂ ದೇಶಗಳ ಸೇನೆಯ ನಡುವೆ
ಸಂಯುಕ್ತ ಕಾರ್ಯನಿರ್ವಹಣಾ ಸಾಮರ್ಥ್ಯ
ವನ್ನು ಹೆಚ್ಚಿಸುವುದು
-
ಉಗ್ರವಾದ ವಿರೋಧಿ ಕಾರ್ಯಾಚರಣೆಗಳು
, ಪರ್ವತ ಪ್ರದೇಶಗಳಲ್ಲಿ ಯುದ್ಧ ತಂತ್ರಗಳು ಹಾಗೂ
ಮಾನವೀಯ ಸಹಾಯ ಮತ್ತು ವಿಪತ್ತು ನಿರ್ವಹಣೆಯ ಜಂಟಿ ಅಭ್ಯಾಸ
- ಗಡಿ ಪ್ರದೇಶಗಳಲ್ಲಿ ಭದ್ರತೆ ಬಲಪಡಿಸಲು ಅಗತ್ಯವಾದ
ತಂತ್ರಜ್ಞಾನ ಮತ್ತು ಅನುಭವ ಹಂಚಿಕೆ
-
ಭಾರತ–ನೇಪಾಳ ಸೇನೆಗಳ ಮಧ್ಯೆಯಿನ
ಅಂತರ್ರಾಷ್ಟ್ರೀಯ ಮಿಲಿಟರಿ ಸಹಕಾರ
ವನ್ನು ವಿಸ್ತರಿಸುವುದು
“ಸೂರ್ಯಕಿರಣ XIX – 2025”
ಅಭ್ಯಾಸವು ಭಾರತ–ನೇಪಾಳ ದೇಶಗಳ ನಡುವಿನ
ನಂಬಿಕೆ, ಸಹಕಾರ ಮತ್ತು ಸಮರಸತನದ ಪ್ರತೀಕ
. ಇದು ಎರಡೂ ಸೇನೆಗಳ ತಂತ್ರಜ್ಞಾನ, ಕಾರ್ಯತಂತ್ರ ಮತ್ತು ಶಕ್ತಿ ಸಮನ್ವಯಕ್ಕೆ ಮಹತ್ವದ ವೇದಿಕೆ ಒದಗಿಸುತ್ತದೆ. ಗಡಿ ಭದ್ರತೆ, ಉಗ್ರವಾದ ನಿಗ್ರಹ ಮತ್ತು ಮಾನವೀಯ ಸಹಾಯ ಕಾರ್ಯಗಳಲ್ಲಿ ಈ ಅಭ್ಯಾಸದಿಂದ ಉಂಟಾಗುವ ಅನುಭವ ಭವಿಷ್ಯದಲ್ಲಿ ಇಬ್ಬರಿಗೂ ಉಪಯೋಗವಾಗಲಿದೆ.
Take Quiz
Loading...