* ಅಲೋಕ್ ಆರಾಧೆ ಮತ್ತು ವಿಪುಲ್ ಎಂ ಪಂಚೋಲಿ ಅವರು ಶುಕ್ರವಾರ(ಆಗಸ್ಟ್ 30) ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರ ನೇಮಕಾತಿಯಿಂದ 34 ನ್ಯಾಯಮೂರ್ತಿಗಳ ಸಂಪೂರ್ಣ ಬಲದೊಂದಿಗೆ ಸುಪ್ರೀಂ ಕೋರ್ಟ್ ಕಾರ್ಯ ನಿರ್ವಹಿಸಲಿದೆ.* ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಿಜೆಐ ಬಿ ಆರ್ ಗವಾಯಿ ಇಬ್ಬರು ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದರು.* ಕೊಲಿಜಿಯಂ (ಸಿಜೆಐ ಬಿ ಆರ್ ಗವಾಯಿ, ಸೂರ್ಯಕಾಂತ್, ವಿಕ್ರಮ್ ನಾಥ್, ಜೆ ಕೆ ಮಹೇಶ್ವರಿ, ಬಿ ವಿ ನಾಗರತ್ನ) ಇವರ ಪದೋನ್ನತಿಗೆ ಶಿಫಾರಸ್ಸು ಮಾಡಿತ್ತು. ಆದರೆ ನ್ಯಾ. ನಾಗರತ್ನ ಅವರು ಪಂಚೋಲಿ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿ, ಇದು ನ್ಯಾಯಾಂಗ ಆಡಳಿತಕ್ಕೆ ಹಾನಿಕಾರಕವಾಗಬಹುದು ಎಂದು ಎಚ್ಚರಿಸಿದ್ದರು.* ಹೈಕೋರ್ಟ್ ಹಿರಿಯತೆ ಪಟ್ಟಿಯಲ್ಲಿ 57ನೇ ಸ್ಥಾನದಲ್ಲಿದ್ದರೂ ಪಂಚೋಲಿ ಅವರನ್ನು ಬಡ್ತಿ ನೀಡಲಾಗಿದೆ. ಅವರು 2031ರಲ್ಲಿ ಸುಪ್ರೀಂ ಕೋರ್ಟ್ನ 60ನೇ ಸಿಜೆಐ ಆಗಲಿದ್ದಾರೆ ಮತ್ತು ಗುಜರಾತ್ ಹೈಕೋರ್ಟ್ನಿಂದ ಸುಪ್ರೀಂ ಕೋರ್ಟ್ಗೆ ಬಂದ ಮೂರನೇ ನ್ಯಾಯಮೂರ್ತಿಯಾಗಿದ್ದಾರೆ.* ಅಲೋಕ್ ಆರಾಧೆ 2009ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ನ್ಯಾಯಾಧೀಶರಾಗಿ ಪ್ರಾರಂಭಿಸಿ, ಜಮ್ಮು-ಕಾಶ್ಮೀರ, ಕರ್ನಾಟಕ, ತೆಲಂಗಾಣ ಮತ್ತು ಬಾಂಬೆ ಹೈಕೋರ್ಟ್ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.* ಜನವರಿ 2025ರಲ್ಲಿ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ನಂತರ, ಸುಪ್ರೀಂ ಕೋರ್ಟ್ಗೆ ಬಡ್ತಿ ಪಡೆದಿದ್ದಾರೆ.