* ನ್ಯಾಯಮೂರ್ತಿ ಸೂರ್ಯ ಕಾಂತ್ ಸೋಮವಾರ (ನವೆಂಬರ್ 24, 2025) ಭಾರತದ 53 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು , ಇದು ನ್ಯಾಯಾಂಗದ ಚುಕ್ಕಾಣಿಯಲ್ಲಿ ಸುಮಾರು 15 ತಿಂಗಳ ಅಧಿಕಾರಾವಧಿಯ ಆರಂಭವನ್ನು ಸೂಚಿಸುತ್ತದೆ.* ಸೋಮವಾರ (ನವೆಂಬರ್ 24, 2025) ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ 53 ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಸಂವಿಧಾನವನ್ನು ಎತ್ತಿಹಿಡಿಯುವ ಮತ್ತು ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವ ಬದ್ಧತೆಯನ್ನು ಹಿಂದಿಯಲ್ಲಿ ಪ್ರತಿಜ್ಞೆ ಮಾಡುವ ಮೂಲಕ ಅವರು ಅಧಿಕಾರ ಸ್ವೀಕರಿಸಿದರು.* ಹಾಲಿ ಸಿಜೆಐ ಬಿ.ಆರ್.ಗವಾಯಿ ಅವರು ಭಾನುವಾರ ನಿವೃತ್ತರಾದರು.ಸೂರ್ಯಕಾಂತ ಅವರನ್ನು ಮುಂದಿನ ಸಿಜೆಐ ಆಗಿ,ಅಕ್ಟೋಬರ್ 30 ರಂದು ನೇಮಕ ಮಾಡಲಾಯಿತು.15 ತಿಂಗಳು ಈ ಹುದ್ದೆಯಲ್ಲಿರುವ ಇವರು,65 ವರ್ಷ ವಯಸ್ಸು ತಲುಪಿದ ಬಳಿಕ 2027 ರ ಫೆಬ್ರುವರಿ 9 ರಂದು ನಿವೃತ್ತರಾಗಲಿದ್ದಾರೆ.* ಗ್ರಾಮೀಣ ಹಿನ್ನಲೆಯಿಂದ ಉನ್ನತ ನ್ಯಾಯಪೀಠದವರೆಗೆ ತಲುಪಿದ ಅವರ ಜೀವನಪ್ರಯಾಣವು ನ್ಯಾಯ, ಮೌಲ್ಯ, ಶ್ರಮ ಮತ್ತು ಸಮಾನತೆಗೆ ನಿದರ್ಶನವಾಗಿದೆ.* ಚಂಡೀಗಢಕ್ಕೆ ತೆರಳಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಹಿರಿಯ ವಕೀಲರೊಂದಿಗೆ ಕಾರ್ಯನಿರ್ವಹಿಸಿದರು.2000ರಲ್ಲಿ ಅವರು ಹರಿಯಾಣದ Advocate General ಆಗಿ ನೇಮಕಗೊಂಡರು.* ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ವೃತ್ತಿ ಜೀವನ : - 2001ರಲ್ಲಿ “Senior Advocate” ಪಟ್ಟ ಪಡೆದ ಅವರು ನ್ಯಾಯಾಂಗ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟರು.-2004 :ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ನ್ಯಾಯಮೂರ್ತಿಯಾಗಿ ನೇಮಕ-2018 :ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ- 2019 :ಭಾರತದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಏರಿಕೆ* ನ್ಯಾಯಮೂರ್ತಿಯಾಗಿ ಅವರು ಸಾಮಾನ್ಯ ಜನರ ಹಕ್ಕುಗಳ ರಕ್ಷಣೆಗೆ ವಿಶೇಷ ಒತ್ತು ನೀಡುತ್ತಾ, ನ್ಯಾಯಾಂಗ ಸಂಪನ್ಮೂಲಗಳ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಉತ್ತೇಜಿಸುವಲ್ಲಿ ದೊಡ್ಡ ಪಾತ್ರವಹಿಸಿದರು.*ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರ ಕಾರ್ಯಾವಧಿ ಸುಮಾರು 14–15 ತಿಂಗಳುಗಳು ಇರಲಿದೆ.* ಸೂರ್ಯಕಾಂತ ಅವರ ನ್ಯಾಯಾಂಗ ಜೀವನದಲ್ಲಿ ಅವರು ಹಲವಾರು ಮಹತ್ವದ ತೀರ್ಪುಗಳಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ:1. Article 370 – ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ2. Sedition Law (124A) ಸ್ಥಗಿತ3. Pegasus ಪ್ರಕರಣ4. OROP – One Rank One ಪೆನ್ಷನ್5. AMU Minority ಸ್ಟೇಟಸ್6. ಮಹಿಳಾ ಹಕ್ಕುಗಳು ಮತ್ತು ಪಾರದರ್ಶಕ ಚುನಾವಣಾ ದಾಖಲೆಗಳು