* ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ಸುಪ್ರೀಂ ಕೋರ್ಟ್ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (52ನೇ ಸಿಜೆಐ) ಶಿಫಾರಸು ಮಾಡಲಾಗಿದೆ.* ಹಾಲಿ ಸಿಜೆಐ ಸಂಜೀವ್ ಖನ್ನಾ ಅವರು ಮೇ 13ರಂದು ನಿವೃತ್ತಿಯಾಗಲಿದ್ದು, ಗವಾಯಿ ಅವರು ಮೇ 14ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಅವರು ನವೆಂಬರ್ 23ರವರೆಗೆ ಆಯ್ಕೆಯಲ್ಲಿರುತ್ತಾರೆ.* ಗವಾಯಿ ಅವರು 2019ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದು, ಪರಿಶಿಷ್ಟ ಜಾತಿಗೆ ಸೇರಿದವರು.* ತಮ್ಮ ಸೇವಾ ಅವಧಿಯಲ್ಲಿ ಮಹತ್ವದ ತೀರ್ಪುಗಳಲ್ಲಿ ಭಾಗಿಯಾಗಿದ್ದು ಕಲಂ 370 ರದ್ದತಿ, ಚುನಾವಣೆ ಬಾಂಡ್ ಯೋಜನೆ ರದ್ದತಿ, ನೋಟು ರದ್ದತಿ ತೀರ್ಮಾನ, ಮತ್ತು ಮೀಸಲಾತಿ ಕುರಿತ ತೀರ್ಪುಗಳಲ್ಲಿ ಪಾಲ್ಗೊಂಡಿದ್ದಾರೆ.* ಅಲ್ಲದೇ, ಆಸ್ತಿ ಧ್ವಂಸ ಮಾಡುವ ಮುನ್ನ ಕಾರಣ ಕೇಳುವ ನೋಟಿಸ್ ನೀಡಬೇಕೆಂದು ದೇಶವ್ಯಾಪಿ ಮಾರ್ಗಸೂಚಿ ಹೊರಡಿಸಿದ ನ್ಯಾಯಪೀಠವನ್ನು ನೇತೃತ್ವ ವಹಿಸಿದ್ದರು.