* ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಲ್ಲಿ ಒಂಬತ್ತು ತಿಂಗಳಿಗಿಂತ ಹೆಚ್ಚು ಕಾಲ ಸಿಕ್ಕಿಬಿದ್ದಿರುವ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಕರೆತರಲು ನಾಸಾ ಮತ್ತು ಸ್ಪೇಸ್ಎಕ್ಸ್ ಕ್ರ್ಯೂ-10 ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಕಾರ್ಯಾಚರಣೆ ಪ್ರಾರಂಭಿಸಿದವು.* ಕಳೆದ ಜೂನ್ನಿಂದ ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದಿರುವ ನಾಸಾ ಗಗನಯಾತ್ರಿಗಳನ್ನು ಕರೆತರಲು ನಾಲ್ಕು ಸಿಬ್ಬಂದಿಗಳನ್ನೊಳಗೊಂಡ ಸ್ಪೇಸ್ಎಕ್ಸ್ ಕ್ರ್ಯೂ -10 ಬಾಹ್ಯಾಕಾಶ ನೌಕೆ ಭಾನುವಾರ(ಮಾರ್ಚ್ 16) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿತು.* ಸ್ಪೇಸ್ಎಕ್ಸ್ನ 'ಕ್ಯೂ ಡ್ರಾಗನ್' ಗಗನನೌಕೆಯಲ್ಲಿ ನಾಸಾದ ಆ್ಯನ್ ಮೆಕ್ಲೀನ್ ಮತ್ತು ನಿಕೋಲ್ ಆಯರ್ಸ್, ಜಪಾನ್ನ ತಕುಯಾ ಒನಿಶಿ ಹಾಗೂ ರಷ್ಯಾದ ಕಿರಿಲ್ ಪೆಸ್ಕೊವ್ ಐಎಸ್ ಎಸ್ ಗೆ ತೆರಳಿದ್ದರು.* ಗಗನನೌಕೆಯು ಮರಳುವಾಗ ಸುನಿತಾ ಮತ್ತು ಬುಚ್ ಅವರ ಜೊತೆಗೆ ಐಎಸ್ಎಸ್ನಲ್ಲಿರುವ ನಿಕ್ ಹೇಗ್ಮತ್ತು ಅಲೆಕ್ಸಾಂಡರ್ ಗೊರ್ಬನೊವ್ ಅವರನ್ನೂ ಕರೆತರಲಿದೆ. ಎಲ್ಲ ಪ್ರಕ್ರಿಯೆಗಳು ವೇಳಾಪಟ್ಟಿಯಂತೆ ನಡೆದರೆ, ಮಾರ್ಚ್19ರಂದು 'ಕ್ರ್ಯೂ-9' ಮಿಷನ್ನ ಸಿಬ್ಬಂದಿ ಭೂಮಿಗೆ ಬರುವ ಸಾಧ್ಯತೆಯಿದೆ.* ನಾಸಾ ಗಗನಯಾತ್ರಿ ಫ್ರಾಂಕ್ ರೂಬಿಯೊ 2023 ರಲ್ಲಿ ISS ನಲ್ಲಿ 371 ದಿನ ಕಳೆದರೆ, ವಲೆರಿ ಪಾಲಿಯಕೋವ್ 437 ದಿನ ಮಿರ್ ನಿಲ್ದಾಣದಲ್ಲಿ ಕಳೆದ ವಿಶ್ವ ದಾಖಲೆ ಹೊಂದಿದ್ದಾರೆ.* ಕ್ರ್ಯೂ -10 ತಂಡ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ, ಮುಂದಿನ ಬಾಹ್ಯಾಕಾಶ ನೌಕೆಯ ವಿನ್ಯಾಸಗಳಿಗಾಗಿ ಸುಡುವ ಪರೀಕ್ಷೆಗಳು ಮತ್ತು ಮಾನವ ದೇಹದ ಮೇಲೆ ಬಾಹ್ಯಾಕಾಶದ ಪರಿಣಾಮಗಳ ಬಗ್ಗೆ ಸಂಶೋಧನೆ ಸೇರಿದಂತೆ ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತಾರೆ.