* ನಾಸಾ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಹೊರಬಂದು ಸುಮಾರು 5.5 ಗಂಟೆಗಳ ಕಾಲ ಆಕಾಶದಲ್ಲಿ ನಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. * ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಮಾಜಿ ಗಗನಯಾತ್ರಿ ಪೆಗ್ಗಿ ವಿಟ್ಸನ್ ಅವರ ಹಿಂದಿನ ದಾಖಲೆಯನ್ನು ಹಿಂದಿಕ್ಕುವ ಮೂಲಕ ಮಹಿಳೆಯೊಬ್ಬರು ದೀರ್ಘಾವಧಿಯ ಬಾಹ್ಯಾಕಾಶ ನಡಿಗೆಗಾಗಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. * ವಿಲಿಯಮ್ಸ್ ಈಗ ಒಂಬತ್ತು ಬಾಹ್ಯಾಕಾಶ ನಡಿಗೆಗಳಲ್ಲಿ ಒಟ್ಟು 62 ಗಂಟೆ 6 ನಿಮಿಷಗಳ ಬಾಹ್ಯಾಕಾಶ ನಡಿಗೆ ಸಮಯವನ್ನು ದಾಖಲಿಸಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಹವರ್ತಿ ಗಗನಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ಅವರ ಇತ್ತೀಚಿನ ಎಕ್ಸ್ಟ್ರಾವೆಹಿಕ್ಯುಲರ್ ಚಟುವಟಿಕೆಯ (EVA) ಸಮಯದಲ್ಲಿ ಈ ಸಾಧನೆಯು ಸಂಭವಿಸಿದೆ. * ಈ ನಡಿಗೆಯಲ್ಲಿ ಸುನಿತಾ ಹಾಗೂ ವಿಲ್ಮೋರ್ ಅವರು ರೇಡಿಯೊ ಫ್ರೀಕ್ವೆನ್ಸಿ ಗ್ರೂಮ್ ಆ್ಯಂಟೆನಾವನ್ನು ತೆಗೆದು, ಅದರಲ್ಲಿ ಸಂಗ್ರಹವಾದ ಹೊರಗಿನ ವಸ್ತುಗಳ ಮಾದರಿಯನ್ನು ಡೆಸ್ಟಿನಿ ಪ್ರಯೋಗಾಲಯ ಹಾಗೂ ಕ್ವೆಸ್ಟ್ ಏರ್ಲಾಕ್ಗೆ ಕಳುಹಿಸಿದ್ದಾರೆ ಎಂದು ನಾಸಾ ಹೇಳಿದೆ.* 2024ರ ಜೂನ್ನಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಬಂದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಎಂಟು ದಿನಗಳಲ್ಲಿ ನಿಲ್ದಾಣದ ಪ್ರಯೋಗಾಲಯದಲ್ಲಿ ಕಳೆದು ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ ಎದುರಾದ ತಾಂತ್ರಿಕ ಸಮಸ್ಯೆಗಳಿಂದಾಗಿ ಅವರನ್ನು ವಾಪಸ್ ಕರೆಸಿಕೊಳ್ಳುವುದನ್ನು ಮುಂದೂಡಲಾಗಿದೆ. * ಈಗ ಎಲಾನ್ ಮಸ್ಕ್ ಒಡೆತನದ ಸ್ಪೇಸ್ಎಕ್ಸ್ ಜೊತೆಗೆ ಮಾತುಕತೆ ನಡೆದಿದ್ದು, ಅವರನ್ನು ಸುರಕ್ಷಿತವಾಗಿ ಕರೆತರುವ ಯೋಜನೆ ಶೀಘ್ರದಲ್ಲೇ ನಡೆಯಲಿದೆ. ಬೋಯಿಂಗ್ನ ಸ್ಟಾರ್ಲೈನ್ ಮೂಲಕ ಅವರು ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದರು.* ಸುನೀತಾ ವಿಲಿಯಮ್ಸ್ ಈಗ 62 ಗಂಟೆ 6 ನಿಮಿಷಗಳ ಬಾಹ್ಯಾಕಾಶ ನಡಿಗೆ ಸಮಯವನ್ನು ಸಂಗ್ರಹಿಸಿದ್ದಾರೆ, ಪೆಗ್ಗಿ ವಿಟ್ಸನ್ ಅವರ 60 ಗಂಟೆ 21 ನಿಮಿಷಗಳ ದಾಖಲೆಯನ್ನು ಮುರಿದಿದ್ದಾರೆ.