* ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶ ತಲುಪಿ ಕೆಲ ದಿನಗಳೇ ಕಳೆದಿದ್ದು, ಇದೀಗ ಅವರನ್ನು ಕರೆತರಲು ಸ್ಪೇಸ್‌ ಎಕ್ಸ್‌ನ ‘ಡ್ಯ್ರಾಗನ್‌’ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿದೆ. * ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್‌ ವಿಲ್ಮೋರ್ ಅವರನ್ನು ಮುಂದಿನ ವರ್ಷ ಫೆಬ್ರುವರಿಯಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ತಿಳಿಸಿದೆ.* ಇದೇ ವರ್ಷ ಜೂನ್‌ನಲ್ಲಿ ಬೋಯಿಂಗ್‌ನ ‘ಸ್ಟಾರ್‌ ಲೈನರ್’ ನೌಕೆಯಲ್ಲಿ ಬಾಹ್ಯಾಕಾಶ ನಿಲ್ದಾಣ ತಲುಪಿದ್ದ ಸುನಿತಾ ಮತ್ತು ಬುಚ್‌, ತಾಂತ್ರಿಕ ದೋಷದಿಂದ ಭೂಮಿಗೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ನೌಕೆಯಲ್ಲಿ ಹೀಲಿಯಂ ಸೋರಿಕೆ ಉಂಟಾಗಿ ಒಂದು ವಾರದಲ್ಲೇ ಹಿಂತಿರುಗಬೇಕಾದ ಅವರು ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿಯಬೇಕಾಯಿತು.* ಸುನಿತಾ ಮತ್ತು ಬುಚ್‌ ಅವರನ್ನು ಭೂಮಿಗೆ ಮರಳಿ ಕರೆತರುವ ಕಾರ್ಯಾಚರಣೆ ಪ್ರಾರಂಭಿಸಿರುವ ನಾಸಾ ಮತ್ತು ಸ್ಪೇಸ್ ಎಕ್ಸ್, ಸೆಪ್ಟೆಂಬರ್ 26 ರಂದು (ಶನಿವಾರ) ಕ್ಯ್ರೂ-9 ಮಿಷನ್ ಪ್ರಾರಂಭಿಸಿತ್ತು. * ಕೇಪ್ ಕ್ಯಾನವೆರಲ್ ಸ್ಪೇಸ್ ಫೋರ್ಸ್‌ ಕೇಂದ್ರದಿಂದ ಸ್ಪೇಸ್ ಎಕ್ಸ್‌ನ ‘ಡ್ಯ್ರಾಗನ್’ ವ್ಯೋಮ ನೌಕೆಯನ್ನು ಉಡ್ಡಯನ ಮಾಡಿತ್ತು. ಈ ನೌಕೆಯಲ್ಲಿ ಎರಡು ಖಾಲಿ ಆಸನಗಳನ್ನು ಸುನಿತಾ-ಬುಚ್‌ ಅವರಿಗೆ ಕಾಯ್ದಿರಿಸಲಾಗಿದೆ. ಕ್ಯ್ರೂ-8 ಮಿಷನ್‌ನ ನಾಲ್ವರು ಗಗನಯಾತ್ರಿಗಳು ಅಕ್ಟೋಬರ್ ಮೊದಲ ವಾರದಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ.