* ಯುನೆಸ್ಕೋ ಪ್ರತೀ ವರ್ಷ ವಾಸ್ತುಶಿಲ್ಪ, ಪ್ರಕೃತಿ ಸಂರಕ್ಷಣೆ ಮತ್ತು ವಿನ್ಯಾಸ ಕ್ಷೇತ್ರದ ವಿಶ್ವದ ಪ್ರತಿಷ್ಠಿತ 7 ಸ್ಥಳಗಳನ್ನು, ಸ್ಮಾರಕಗಳನ್ನು ಗುರುತಿಸಿ “ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿ" ನೀಡುತ್ತಿದ್ದು, (UNESCO Prix Versailles Museums 2024) ವಿಶ್ವದ ಏಳು ಅತ್ಯಂತ ಸುಂದರವಾದ ವಸ್ತು ಸಂಗ್ರಹಾಲಯ ಹಾಗೂ ಸ್ಥಳಗಳ ಪಟ್ಟಿಯಲ್ಲಿ ಸ್ಮತಿವನ ಸ್ಥಾನ ಪಡೆದಿದ್ದು ಪ್ರಶಸ್ತಿಗೆ ಆಯ್ಕೆಯಾಗಿದೆ.*  ಸುಳ್ಯ ತಾಲೂಕಿನ ಜಾಲ್ಸೂರಿನವರಾದ ಡಾ| ಆರ್‌.ಕೆ. ನಾಯರ್‌ ಗುಜರಾತ್‌ನ ಭುಜ್‌ನಲ್ಲಿ ನಿರ್ಮಿಸಿರುವ ಭೂಕಂಪ ಸ್ಮಾರಕ ಸ್ಮತಿ ವನಕ್ಕೆ ಯೂನೆಸ್ಕೋ ಪ್ರಶಸ್ತಿ ಲಭಿಸಿದೆ. ಗುಜರಾತ್: ಯುನೆಸ್ಕೋದ ಅತ್ಯಂತ ಸುಂದರವಾದ ವಸ್ತುಸಂಗ್ರಹಾಲಯಗಳ ಪಟ್ಟಿಯಲ್ಲಿ ಸೇರಿರುವ  ಭುಜ್‌ನ ಸ್ಮೃತಿವಾನ್ ಭೂಕಂಪದ ಸ್ಮಾರಕವನ್ನು ಪ್ರಧಾನಿ ಮೋದಿ ಅವರು 22 ಆಗಸ್ಟ್ 2022 ರಂದು ಉದ್ಘಾಟಿಸಿದರು.* ಸುಳ್ಯ ತಾಲೂಕಿನ ಜಾಲ್ಸೂರಿನವರಾದ ಡಾ| ಆರ್‌.ಕೆ. ನಾಯರ್‌ ಗುಜರಾತ್‌ನ ಉದ್ಯಮಿ ಹಾಗೂ ಪರಿಸರ ತಜ್ಞರಾಗಿದ್ದಾರೆ. 2001 ರಿಂದ ಭೂಕಂಪದ ಸಂತ್ರಸ್ತರ ದುಃಖಿತ ಕುಟುಂಬಗಳಿಗಾಗಿ ರಚಿಸಲಾಗಿದೆ.* * ಪರಿಸರತಜ್ಞ ಆರ್.ಕೆ. ನಾಯರ್‌ ಅವರು ಮಿಯಾವಾಕಿ ಅರಣೀಕರಣ ಯೋಜನೆಯ ಪ್ರಕಾರ ಸ್ಮತಿ ವನದಲ್ಲಿ 4.60 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. 36 ಎಕ್ರೆ ಪ್ರದೇಶದಲ್ಲಿ ಸುಂದರ ಅರಣ್ಯವನ್ನು ನಿರ್ಮಿಸಿದ್ದಾರೆ. 470 ಎಕ್ರೆ ಪ್ರದೇಶದಲ್ಲಿ ಸ್ಮತಿ ವನ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದು ಮೊದಲ ಹಂತದಲ್ಲಿ 170 ಎಕ್ರೆ ಸ್ಥಳದಲ್ಲಿ ಸ್ಮತಿ ವನ ನಿರ್ಮಾಣ ಮಾಡಲಾಗಿದೆ. * ಇಲ್ಲಿ ಏಷ್ಯಾದ ಅತೀ ದೊಡ್ಡ ಭೂಕಂಪ ಮ್ಯೂಸಿಯಂ, ಭೂಕಂಪದ ಇತಿಹಾಸ ತಿಳಿಸುವ ಡಿಜಿಟಲ್ ಮ್ಯೂಸಿಯಂ, ಸ್ಮಾರಕ ಹಾಗೂ ಅರಣ್ಯ ಬೆಳೆಸಲಾಗಿದೆ.