ಸುದರ್ಶನ ಚಕ್ರ ಯೋಜನೆ* ಪ್ರಧಾನಿ ನರೇಂದ್ರ ಮೋದಿ ‘ಸುದರ್ಶನ ಚಕ್ರ’ ಹೆಸರಿನ ಸ್ವದೇಶಿ ವಾಯು ರಕ್ಷಣಾ ವ್ಯವಸ್ಥೆಯನ್ನು ಘೋಷಿಸಿದ್ದಾರೆ.* ಇದು ದೇಶದ ಸೇನಾ ನೆಲೆಗಳನ್ನು ರಕ್ಷಿಸುವುದರೊಂದಿಗೆ, ಭಯೋತ್ಪಾದಕರನ್ನು ತಡೆಯುವ ಗುರಿ ಹೊಂದಿದೆ. ಯೋಜನೆಯ ಸಂಶೋಧನೆ, ಅಭಿವೃದ್ಧಿ ಹಾಗೂ ತಯಾರಿಕೆ ಭಾರತದಲ್ಲೇ ನಡೆಯಲಿದೆ. ತಜ್ಞರ ಅಭಿಪ್ರಾಯದಲ್ಲಿ ಇದು ಇಸ್ರೇಲ್ನ ಐರನ್ ಡೋಮ್ ಮಾದರಿಯಂತಿರಬಹುದು. ಜಿಎಸ್ಟಿ ಸುಧಾರಣೆ* ದೀಪಾವಳಿ ವೇಳೆಗೆ ಜಿಎಸ್ಟಿಯಲ್ಲಿ ಮಹತ್ವದ ಬದಲಾವಣೆ ತರಲಾಗುವುದು. ಅಗತ್ಯ ವಸ್ತುಗಳ ಮೇಲಿನ ತೆರಿಗೆ ಕಡಿತವಾಗಲಿದೆ. * ಎಂಎಸ್ಎಂಇಗಳು ಮತ್ತು ಗ್ರಾಹಕರ ಮೇಲಿನ ಹೊರೆ ತಗ್ಗಲಿದೆ. 2047ರ ವೇಳೆಗೆ ಆರ್ಥಿಕತೆಯನ್ನು 10 ಟ್ರಿಲಿಯನ್ ಡಾಲರ್ ಗುರಿ ತಲುಪಿಸಲು ವಿಶೇಷ ಕಾರ್ಯಪಡೆ ರಚಿಸಲಾಗುವುದು.ಉದ್ಯೋಗ ಯೋಜನೆ* ಮುಂದಿನ ಎರಡು ವರ್ಷಗಳಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ಗಾರ್ ಯೋಜನೆ ಆರಂಭಿಸಲಾಗುತ್ತಿದೆ.* ₹1 ಲಕ್ಷ ಕೋಟಿ ಮೊತ್ತದ ಈ ಯೋಜನೆಯಡಿ ಯುವಕರಿಗೆ ಪ್ರತಿ ತಿಂಗಳು ₹15,000 ನೆರವು ದೊರೆಯಲಿದೆ. ಮೂರು ಕೋಟಿ ಯುವಕರು ಇದರ ಪ್ರಯೋಜನ ಪಡೆಯಲಿದ್ದಾರೆ.ಜನಸಂಖ್ಯಾ ಮಿಷನ್* ಗಡಿಭಾಗದ ಪ್ರದೇಶಗಳಲ್ಲಿ ಅಕ್ರಮ ವಲಸೆ ಮತ್ತು ಜನಸಂಖ್ಯಾ ಅಸಮತೋಲನದಿಂದ ಉಂಟಾದ ಸವಾಲುಗಳಿಗೆ ತಡೆಗಟ್ಟುವ ನಿಟ್ಟಿನಲ್ಲಿ ಉನ್ನತ ಮಟ್ಟದ ಜನಸಂಖ್ಯಾ ಮಿಷನ್ ಕೈಗೊಳ್ಳಲಾಗುತ್ತದೆ. ಇದು ರಾಷ್ಟ್ರದ ಭದ್ರತೆ ಮತ್ತು ಒಗ್ಗಟ್ಟಿಗೆ ಬಲ ನೀಡಲಿದೆ.ಅಣು ವಿದ್ಯುತ್ ಯೋಜನೆ* ಮುಂದಿನ 20 ವರ್ಷಗಳಲ್ಲಿ ಅಣು ವಿದ್ಯುತ್ ಸಾಮರ್ಥ್ಯವನ್ನು 10 ಪಟ್ಟು ಹೆಚ್ಚಿಸುವ ಗುರಿಯೊಂದಿಗೆ 10 ಹೊಸ ಅಣು ವಿದ್ಯುತ್ ಸ್ಥಾವರಗಳ ನಿರ್ಮಾಣ ನಡೆಯಲಿದೆ.