* 2023 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಸುಧಾಮೂರ್ತಿ, ವಿಜಯಶ್ರೀ,ಮತ್ತು ಮಂಜುನಾಯಕ ಚಳ್ಳೂರ ಅವರಿಗೆ ಸಾಹಿತ್ಯ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.* 'ಬಾಲ ಸಾಹಿತ್ಯ ಪುರಸ್ಕಾರ' ವಿಜಯಶ್ರೀ ಹಾಲಾಡಿ ಅವರ ಮಕ್ಕಳ ಕಾದಂಬರಿಗೆ, 'ಸೂರಕ್ಕಿ ಗೇಟ್ ಗೆ' ಮತ್ತು ಯುವ ಪುರಸ್ಕಾರ ಮಂಜುನಾಯಕ ಚಳ್ಳೂರ ಅವರ 'ಪೂ ಮತ್ತು ಇತರ ಕಥೆಗಳು' ಕಥಾ ಸಂಕಲನಕ್ಕೆ ಸಾಹಿತ್ಯ ಪುರಸ್ಕಾರ ಲಭಿಸಿದೆ.* ಲೇಖಕಿ ಸುಧಾ ಮೂರ್ತಿ ಅವರು ಬರೆದ 'ಗ್ರಾಂಡ್ ಪೇರೆಂಟ್ಸ್ ಬ್ಯಾಗ್ ಆಫ್ ಸ್ಟೋರೀಸ್' ಕೃತಿಗೆ ಇಂಗ್ಲಿಷ್ ಭಾಷಾ ವಿಭಾಗದಲ್ಲಿ ಬಾಲ ಸಾಹಿತ್ಯ ಪುರಸ್ಕಾರ ದೊರೆತಿದೆ.* ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು ತಲಾ 50 ಸಾವಿರ ನಗದು ಹಾಗು ಫಲಕಗಳನ್ನು ಪಡೆಯಲಿದ್ದಾರೆ.* ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ವರ್ಷದ ಬಾಲ ಸಾಹಿತ್ಯ ಪುರಸ್ಕಾರ ಹಾಗೂ ಯುವ ಪುರಸ್ಕಾರ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ. ಬಾಲ ಸಾಹಿತ್ಯ ಪುರಸ್ಕಾರಕ್ಕೆ ಕನ್ನಡದ ಪ್ರಸಿದ್ಧ ಲೇಖಕಿ ಸುಧಾ ಮೂರ್ತಿ, ವಿಜಯಶ್ರೀ ಹಾಲಾಡಿ ಸೇರಿ 22 ಜನರು ಹಾಗೂ ಯುವ ಪುರಸ್ಕಾರಕ್ಕೆ ಮಂಜುನಾಯಕ್ ಚಳ್ಳೂರು ಸೇರಿ 20 ಲೇಖಕರು ಭಾಜನರಾಗಿದ್ದಾರೆ.