* ಪಹಲ್ಗಾಂ ದಾಳಿಯ ನಂತರ ಭಾರತ–ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯ ನಡುವೆ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಸಮೋಷ್ಣ ವಲಯದಲ್ಲಿ ಕಾರ್ಯನಿರ್ವಹಿಸಬಲ್ಲ ‘ಸ್ಟ್ರ್ಯಾಟ್ರೋಸ್ಫಿಯರಿಕ್ ಏರ್ಶಿಪ್ ಪ್ಲ್ಯಾಟ್ಫಾರಂ’ ಎಂಬ ಮಾನವರಹಿತ ಬಲೂನ್ ಮಾದರಿಯ ನೌಕೆಯ ಯಶಸ್ವಿ ಪ್ರಯೋಗವನ್ನು ಮಧ್ಯಪ್ರದೇಶದ ಶ್ಯೋಪುರ್ನಲ್ಲಿ ನೆರವೇರಿಸಿದೆ.* ಇದು ಭೂಮಿಯಿಂದ 17 ಕಿ.ಮೀ ಎತ್ತರದವರೆಗೆ ಹಾರಿದ ನಂತರ ಭೂಮಿಗೆ ಸುರಕ್ಷಿತವಾಗಿ ಇಳಿದಿತು.* ಈ ನೌಕೆ 62 ನಿಮಿಷಗಳ ಹಾರಾಟದ ವೇಳೆ ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸಿತು. ಹೀಲಿಯಂ ಅನಿಲ ಹಾಗೂ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಈ ಏರ್ಶಿಪ್ಗಳು, ನಿರ್ದಿಷ್ಟ ಸ್ಥಳದಲ್ಲಿ ದೀರ್ಘಕಾಲ ಇರುತ್ತದೆ ಹಾಗೂ ನಿರಂತರ ನಿಗಾ ಹಾಗೂ ಸಂವಹನಕ್ಕೆ ಬಳಸಬಹುದು. * ಉಪಗ್ರಹ ಹಾಗೂ ಡ್ರೋನ್ ನಡುವಣ ತಂತ್ರಜ್ಞಾನ ಖಾಲಿತನವನ್ನು ಈ ಸಾಧನ ತುಂಬಬಲ್ಲದು.* ಅತ್ಯಲ್ಪ ವೆಚ್ಚದಲ್ಲಿ ಮರುಬಳಕೆ ಸಾಧ್ಯವಾಗುವ ಈ ತಂತ್ರಜ್ಞಾನವನ್ನು ಸಿದ್ಧಪಡಿಸಲು ಅಗ್ಗಣ ದೇಶಗಳಿಗಷ್ಟೇ ಸಾಧ್ಯವಾಗಿದ್ದು, ಭಾರತ ಕೂಡ ಇದೀಗ ಆ ಪಟ್ಟಿಗೆ ಸೇರ್ಪಡೆಯಾಗಿದೆ.