* ಫಿನ್ಲ್ಯಾಂಡ್ 2025ಕ್ಕೂ ಸತತ ಎಂಟನೇ ವರ್ಷವೂ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ಮುಂದುವರಿದಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಯೋಗಕ್ಷೇಮ ಸಂಶೋಧನಾ ಕೇಂದ್ರದ ವರದಿಯ ಪ್ರಕಾರ, ಇತರ ನಾರ್ಡಿಕ್ ದೇಶಗಳೂ ಶ್ರೇಯಾಂಕದಲ್ಲಿ ಮುಂದಿವೆ.* ಪ್ರತಿವರ್ಷ ಮಾರ್ಚ್ 20ರಂದು ವಿಶ್ವ ಸಂತೋಷ ದಿನವನ್ನು ಆಚರಿಸಲಾಗುತ್ತದೆ. ಕಳೆದ 10 ವರ್ಷಗಳಿಂದ ವಿಶ್ವಸಂಸ್ಥೆಯು ಇದೇ ದಿನದಂದು ವರದಿಯನ್ನು ಪ್ರಕಟಿಸುತ್ತಿದೆ. ಯಾವ ದೇಶಗಳಲ್ಲಿ ಜನರು ಎಷ್ಟು ಸಂತೋಷವಾಗಿದ್ದಾರೆ ಎಂಬುದನ್ನು ಸಂತೋಷ ಸೂಚ್ಯಂಕದ ವರದಿಯು ಬಹಿರಂಗಪಡಿಸುತ್ತದೆ.* ಫಿನ್ಲ್ಯಾಂಡ್ ಜೊತೆಗೆ ಡೆನ್ಮಾರ್ಕ್, ಐಸ್ಟಾಂಡ್ ಮತ್ತು ಸ್ವೀಡನ್ ಮೊದಲ ನಾಲ್ಕು ಮತ್ತು ಅದೇ ಕ್ರಮದಲ್ಲಿ ಉಳಿದಿವೆ. ದೇಶದ ಶ್ರೇಯಾಂಕಗಳನ್ನು ಜನರು ತಮ್ಮ ಸ್ವಂತ ಜೀವನವನ್ನು ರೇಟ್ ಮಾಡಲು ಕೇಳಿದಾಗ ನೀಡುವ ಉತ್ತರಗಳನ್ನು ಆಧರಿಸಿದೆ. ವಿಶ್ಲೇಷಣಾ ಸಂಸ್ಥೆ ಗ್ಯಾಲಪ್ ಮತ್ತು ಯುಎನ್ ಸಸೈನಬಲ್ ಡೆವಲಪ್ಮೆಂಟ್ ಸೊಲ್ಯೂಷನ್ಸ್ ನೆಟ್ವರ್ಕ್ ಸಹಭಾಗಿತ್ವದಲ್ಲಿ ಅಧ್ಯಯನವನ್ನು ಮಾಡಲಾಗಿದೆ.* 147 ದೇಶಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ ಈ ಸಂತೋಷ ಸೂಚ್ಯಂಕದ ವರದಿಯನ್ನು ಸಿದ್ಧಪಡಿಸಲಾಗಿದೆ. 2025ರ ಸಂತೋಷ ಸೂಚ್ಯಂಕದ ವರದಿಯಲ್ಲಿ, 147 ದೇಶಗಳ ಪೈಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತವು 118ನೇ ಸ್ಥಾನದಲ್ಲಿದೆ.* ಕೋಸ್ಟಾರಿಕಾ ಮತ್ತು ಮೆಕ್ಸಿಕೋ ಮೊದಲ ಬಾರಿ ಅಗ್ರ 10ರಲ್ಲಿ ಪ್ರವೇಶಿಸಿವೆ, ಇಸ್ರೇಲ್ 8ನೇ ಸ್ಥಾನದಲ್ಲಿದೆ. ಅಮೆರಿಕ 11ನೇ ಸ್ಥಾನದಿಂದ 24ಕ್ಕೆ ಇಳಿದಿದೆ.* ಭೀಕರ ಅಂತರ್ಯುದ್ಧದಲ್ಲಿ ಸಿಲುಕಿರುವ ಅಫ್ಘಾನಿಸ್ತಾನ ಮತ್ತೊಮ್ಮೆ ಸಂತೋಷದ ರಾಷ್ಟ್ರಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದ್ದು, 147ನೇ ಸ್ಥಾನದಲ್ಲಿದ್ದು, ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್ (146) ಮತ್ತು ಲೆಬನಾನ್ (145) ಹಿಂದಿನ ಸ್ಥಾನದಲ್ಲಿವೆ.* ಸಂತೋಷವು ಕೇವಲ ಸಂಪತ್ತು ಅಥವಾ ಬೆಳವಣಿಗೆಯ ಬಗ್ಗೆ ಅಲ್ಲ, ಇದು ನಂಬಿಕೆ, ಸಂಪರ್ಕ ಮತ್ತು ಜನರು ನಿಮ್ಮ ಬೆನ್ನನ್ನು ತಟ್ಟಿಕೊಳ್ಳುವ ಹೆಮ್ಮೆಪಡುವ ಮನಸ್ಸು ಹೊಂದಿದ್ದಾರೆಂದು ಎಂದು ಗ್ಯಾಲಪ್ನ ಸಿಇಒ ಜಾನ್ ಕ್ಲಿಪ್ಪನ್ ಹೇಳಿದರು.* ಸಂತೋಷದ ಶ್ರೇಯಾಂಕಗಳು ಆರೋಗ್ಯ, ಸ್ವಾತಂತ್ರ್ಯ, ಔದಾರ್ಯ, ಭ್ರಷ್ಟಾಚಾರದ ಗ್ರಹಿಕೆ ಮುಂತಾದ ಅಂಶಗಳ ಆಧಾರದ ಮೇಲೆ ನಿರ್ಧರಿಸಲ್ಪಡುತ್ತವೆ.