* ಮಧ್ಯಪ್ರದೇಶದ ಇಂದೋರ್ ನಗರವು 2024–25ನೇ ಸಾಲಿನಲ್ಲಿ ಸತತ ಎಂಟನೇ ಬಾರಿ ಭಾರತದ ಅತ್ಯಂತ ಸ್ವಚ್ಛ ನಗರ ಎಂದು ಘೋಷಿಸಲ್ಪಟ್ಟಿದೆ. ಛತ್ತೀಸಗಢದ ಅಂಬಿಕಾಪುರ ಹಾಗೂ ಕರ್ನಾಟಕದ ಮೈಸೂರು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿವೆ.* ವಸತಿ ಮತ್ತು ನಗರ ವ್ಯವಹಾರಗಳ ಕೇಂದ್ರ ಸಚಿವಾಲಯ ಈ ವರ್ಷದ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಿತು.* ಕಾರ್ಯಕ್ರಮ ನವದೆಹಲಿಯಲ್ಲಿ ನಡೆದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.* ರಾಜ್ಯ ಮಟ್ಟದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದು ಗಮನ ಸೆಳೆದಿದೆ. ಛತ್ತೀಸಗಢ ಮತ್ತು ಕರ್ನಾಟಕ ನಂತರ ಸ್ಥಾನಗಳಲ್ಲಿ ಗುರುತಿಸಿಕೊಂಡಿವೆ.* 3 ರಿಂದ 10 ಲಕ್ಷ ಜನಸಂಖ್ಯೆಯ ಗಾತ್ರದ ನಗರಗಳಲ್ಲಿ ಗುಜರಾತ್ನ ಅಹಮದಾಬಾದ್, ಛತ್ತೀಸಗಢದ ರಾಯಪುರ, ಮಹಾರಾಷ್ಟ್ರದ ನವಿ ಮುಂಬೈ ಮತ್ತು ಗುಜರಾತ್ನ ಸೂರತ್ ಪ್ರಮುಖ ಸ್ಥಾನಗಳನ್ನು ಪಡೆದಿವೆ.