* ಕೇಂದ್ರ ಶಿಕ್ಷಣ ಸಚಿವಾಲಯ ಗುರುವಾರ(ಆಗಸ್ಟ್ 04) ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ(NIRF)ವನ್ನು ಘೋಷಿಸಿದೆ. * ಐಐಟಿ ಮದ್ರಾಸ್ ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿ ವಿಭಾಗಗಳಲ್ಲಿ ಸತತ ಏಳನೇ ವರ್ಷವೂ ಅಗ್ರಸ್ಥಾನ ಪಡೆದುಕೊಂಡಿದೆ. ಆದರೆ ಸಂಶೋಧನಾ ವಿಭಾಗದಲ್ಲಿ ಬೆಂಗಳೂರಿನ ಐಐಎಸ್ಸಿ ಮೊದಲ ಸ್ಥಾನದಲ್ಲಿ, ಐಐಟಿ ಮದ್ರಾಸ್ ಎರಡನೇ ಸ್ಥಾನದಲ್ಲಿದೆ.* ಒಟ್ಟಾರೆ ಶ್ರೇಯಾಂಕದಲ್ಲಿ ಐಐಎಸ್ಸಿ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದು, ಇದು ಸತತ 10 ನೇ ವರ್ಷವೂ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.* ಉದ್ಯಾನನಗರಿಯ ಎನ್ಎಲ್ಎಸ್ಐಯು ಭಾರತದ ಅತ್ಯುತ್ತಮ ಕಾನೂನು ಕಾಲೇಜು ಎಂದು ಗುರುತಿಸಲ್ಪಟ್ಟಿದೆ. ಐಐಎಂ ಬೆಂಗಳೂರು ಎರಡನೇ ಅತ್ಯುತ್ತಮ ನಿರ್ವಹಣಾ ಸಂಸ್ಥೆ ಹಾಗೂ ನಾವೀನ್ಯತೆಯಲ್ಲಿ ಮೂರನೇ ಸ್ಥಾನ ಪಡೆದಿದೆ.* ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ದೇಶದ ಮೂರನೇ ಅತ್ಯುತ್ತಮ ವಿಶ್ವವಿದ್ಯಾಲಯವಾಗಿದೆ. ಐಐಟಿ ಬಾಂಬೆ ಒಟ್ಟಾರೆ ಮೂರನೇ ಸ್ಥಾನ ಪಡೆದುಕೊಂಡಿದ್ದು, ಎಂಜಿನಿಯರಿಂಗ್ನಲ್ಲಿ ಮೂರನೇ ಹಾಗೂ ನಾವೀನ್ಯತೆಯಲ್ಲಿ ಎರಡನೇ ಸ್ಥಾನದಲ್ಲಿದೆ.* ಐಐಎಂ ಅಹಮದಾಬಾದ್ ನಿರ್ವಹಣಾ ವಿಭಾಗದಲ್ಲಿ, ಐಐಟಿ ರೂರ್ಕಿ ವಾಸ್ತುಶಿಲ್ಪ ವಿಭಾಗದಲ್ಲಿ, ಏಮ್ಸ್ ದೆಹಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿಭಾಗಗಳಲ್ಲಿ, ಹಾಗೂ ಐಐಟಿ ದೆಹಲಿ ಸಂಶೋಧನಾ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿವೆ.* ಪ್ರತಿ ವರ್ಷ ಪ್ರಕಟವಾಗುವ NIRF ಶ್ರೇಯಾಂಕಗಳು ಶಿಕ್ಷಣ ಸಂಸ್ಥೆಗಳ ಬೋಧನೆ, ಸಂಶೋಧನೆ, ನವೀನತೆ ಮತ್ತು ಒಟ್ಟಾರೆ ಸಾಧನೆಗಳನ್ನು ಮೌಲ್ಯಮಾಪನ ಮಾಡುತ್ತವೆ.