* ದೇಶದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಮದ್ರಾಸ್ನ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ವಂಶವಾಹಿ ದತ್ತಾಂಶ ಮಾಹಿತಿ ಕೋಶವನ್ನು ಆರಂಭಿಸಿದೆ.* ಜಾಗತಿಕ ಕ್ಯಾನ್ಸರ್ ವಂಶವಾಹಿ ಅಧ್ಯಯನದಲ್ಲಿ ಭಾರತದ ಪ್ರಾತಿನಿಧ್ಯ ತೀರಾ ಕಡಿಮೆ ಇದೆ. ಭಾರತ್ ಕ್ಯಾನ್ಸರ್ ವಂಶವಾಹಿ ಅಟ್ಲಾಸ್ (BCGA) ಎಂಬ ಯೋಜನೆ ಇದಾಗಿದೆ.* ಈ ಕಾರ್ಯಕ್ರಮದಡಿಯಲ್ಲಿ ದೇಶವ್ಯಾಪಿ 480 ಸ್ತನ ಕ್ಯಾನ್ಸರ್ಗೆ ಸಂಬಂಧಿಸಿದಂತೆ 960 ವಂಶವಾಹಿಯ ಎಕ್ಸೋಮ್ಗಳನ್ನು ಸಂಗ್ರಹಿಸಲಾಗಿದೆ.* ಈ ಸಂಶೋಧನೆಯಲ್ಲಿ ಮುಂಬೈನ ಕಾರ್ಕಿನೊಸ್ ಹೆಲ್ತ್ಕೇರ್, ಚೆನ್ನೈನ ಬ್ರೆಸ್ಟ್ ಕ್ಲಿನಿಕ್ ಮತ್ತು ಕ್ಯಾನ್ಸರ್ ರಿಸರ್ಚ್ ಮತ್ತು ರಿಲೀಫ್ ಟ್ರಸ್ಟ್ಗಳು ಐಐಟಿ ಮದ್ರಾಸ್ ಜತೆ ಕೈಜೋಡಿಸಿವೆ ಸದ್ಯ ದೇಶದಲ್ಲಿ 14,61,427 ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. 2022ರಿಂದ ಈಚೆಗೆ ಶೇ 12.8ರ ದರದಲ್ಲಿ ಇದು ಹೆಚ್ಚಳವಾಗುತ್ತಿದೆ.