* ಈ ಬಾರಿಯೂ SSLC ಪರೀಕ್ಷಾ 91.12% ಫಲಿತಾಂಶ ಪಡೆದುಕೊಳ್ಳುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯೇ ಮೇಲುಗೈ ಸಾಧಿಸಿದೆ. ಉಡುಪಿ ಜಿಲ್ಲೆ ಶೇಕಡಾ 89.96ರೊಂದಿಗೆ ದ್ವಿತೀಯ ಸ್ಥಾನ, ಉತ್ತರ ಕನ್ನಡ (83.19%), ಶಿವಮೊಗ್ಗ (82.29%) ಹಾಗೂ ಕೊಡಗು (82.21%) ಕ್ರಮವಾಗಿ ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನೂ ಪಡೆದುಕೊಂಡಿವೆ.* ಈ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.62.34; 8,42,173 ವಿದ್ಯಾರ್ಥಿಗಳಲ್ಲಿ 5,24,984 ಮಂದಿ ಉತ್ತೀರ್ಣರಾಗಿದ್ದಾರೆ.* 22 ವಿದ್ಯಾರ್ಥಿಗಳು (ಹದಿನೈದು ಹೆಣ್ಣು ಮಕ್ಕಳು ಸೇರಿ) 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.* ಕಳೆದ ವರ್ಷದ ಶೇ.73.40 ಫಲಿತಾಂಶದೊಂದಿಗೆ ಹೋಲಿಸಿದರೆ ಈ ಬಾರಿ ಶೇ.11.06 ಕುಸಿತವಾಗಿದೆ.* ಆದರೆ ಸಚಿವ ಮಧು ಬಂಗಾರಪ್ಪ ಅವರ ವಿವರಣೆ ಪ್ರಕಾರ, ಕಳೆದ ಬಾರಿ ಶೇ.20 ಗ್ರೇಸ್ ಅಂಕ ಇದ್ದು, ಅಸಲಿ ಫಲಿತಾಂಶ ಶೇ.53 ಮಾತ್ರವಾಗಿತ್ತು. ಈ ಬಾರಿ ಶೇ.10ರಷ್ಟು ಮಾತ್ರ ಗ್ರೇಸ್ ಅಂಕ ನೀಡಲಾಗಿದೆ.* ಹೀಗಾಗಿ ಅಸಲಿ ಫಲಿತಾಂಶದ ಆಧಾರದ ಮೇಲೆ ಈ ವರ್ಷದ ಫಲಿತಾಂಶ ಶೇ.8ರಷ್ಟು ಹೆಚ್ಚು ಎನ್ನಬಹುದು.* ಶಾಲಾ ಪರೀಕ್ಷಾ ಪಾರದರ್ಶಕತೆಗೆ ವೆಬ್ಕಾಸ್ಟಿಂಗ್ ಜಾರಿಗೆ ಬಂದ ನಂತರ ಇದು ಎರಡನೇ ವರ್ಷ ಕುಸಿತದ ಫಲಿತಾಂಶವಾಗಿದೆ.* ಹೆಣ್ಣು ಮಕ್ಕಳು ಶೇ.74 ಪಾಸಾಗಿದ್ದು, ಗಂಡು ಮಕ್ಕಳಿಗೆ (ಶೇ.58) ಹೋಲಿಸಿದರೆ ಮೇಲುಗೈ ಸಾಧಿಸಿದ್ದಾರೆ.* ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ.* ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ (ಶೇ.91.12) ಮೊದಲ, ಕಲಬುರಗಿ (ಶೇ.66.14) ಕೊನೆಯ ಸ್ಥಾನದಲ್ಲಿದೆ.