* ಕೇಂದ್ರ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಸಂಜಯ್ ಕುಮಾರ್ ಮಿಶ್ರಾ ಅವರನ್ನು 2024 ರ ಮೇ 1 ರಂದು ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಜಿಎಸ್‌ಟಿಎಟಿ) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.* ಕ್ಯಾಬಿನೆಟ್ ನೇಮಕಾತಿ ಸಮಿತಿಯು ಮುಂದಿನ ನಾಲ್ಕು ವರ್ಷಗಳ ಅವಧಿಗೆ ಅಥವಾ ಮಿಶ್ರಾ ಅವರಿಗೆ 70 ವರ್ಷ ವಯಸ್ಸಾಗುವವರೆಗೆ (ಇವೆರಡರಲ್ಲಿ ಯಾವುದು ಮೊದಲು ಬರುತ್ತದೋ ಅದು) ಇವರನ್ನು ನೇಮಕ ಮಾಡಿದೆ.* ಸೆಕ್ಷನ್ 107(3) ಪ್ರಕಾರ ನವದೆಹಲಿಯಲ್ಲಿನ GSTAT ನ ಪ್ರಧಾನ ಪೀಠವು ರಾಜ್ಯ ಮತ್ತು ಕೇಂದ್ರದಿಂದ ಒಬ್ಬ ಅಧ್ಯಕ್ಷರು, ನ್ಯಾಯಾಂಗ ಸದಸ್ಯರು ಮತ್ತು ತಾಂತ್ರಿಕ ಸದಸ್ಯರನ್ನು ಒಳಗೊಂಡಿರುತ್ತದೆ. * ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಮೇ 06 ರಂದು (ಸೋಮವಾರ) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಯ (ಜಿಎಸ್‌ಟಿಎಟಿ) 1 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.* ಸೆಪ್ಟೆಂಬರ್‌ 2023 ರಲ್ಲಿ ಜಿಎಸ್‌ಟಿಎಟಿ ಪ್ರಧಾನ ಪೀಠವನ್ನು ದಿಲ್ಲಿಯಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿ 31 ಜಿಎಸ್‌ಟಿಎಟಿ ಬಿ ಬೆಂಚ್‌ಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಸೂಚನೆ ನೀಡಿತ್ತು. * ಗುಜರಾತ್, ಕರ್ನಾಟಕ, ರಾಜಸ್ಥಾನ, ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ಎರಡೆರಡು ಜಿಎಸ್‌ಟಿಎಟಿ ಪ್ರಧಾನ ಪೀಠಗಳನ್ನು ಸ್ಥಾಪಿಸಲಾಗುತ್ತದೆ. ಈ ನ್ಯಾಯಮಂಡಳಿಗಳು ಜಿಎಸ್‌ ಟಿಗೆ ಸಂಬಂಧಿಸಿದ ವಿವಾದಗಳನ್ನು ನಿಭಾಯಿಸಲು ಈ ಪೀಠಗಳು ನಿರ್ಣಾಯಕವಾಗಿವೆ.* ನ್ಯಾಯಮೂರ್ತಿ (ನಿವೃತ್ತ) ಮಿಶ್ರಾ ಅವರು ಜಾರ್ಖಂಡ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು ಮತ್ತು ಭಾರತದ ಮುಖ್ಯ ನ್ಯಾಯಾಧೀಶರ ನೇತೃತ್ವದ ಹುಡುಕಾಟ-ಕಮ್-ಆಯ್ಕೆ ಸಮಿತಿಯಿಂದ ಆಯ್ಕೆಯಾಗಿದ್ದರು.