* ರೈತರ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸಲು ಕೃಷಿ ಉತ್ಪನ್ನಗಳ ಸಾಗಣಿಕೆ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.* ಇಂದು(ಜನವರಿ 18) ಪ್ರೇರಣಾ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಆಯೋಜಿತ ಮಲೆನಾಡು ನವೋದ್ಯಮಿಗಳ ಶೃಂಗಸಭೆ–2025ಗೆ ಚಾಲನೆ ನೀಡಿ, ಅನ್ವೇಷಣಾ, ನಾವೀನ್ಯತೆ ಮತ್ತು ಉದ್ಯಮಶೀಲತೆ ಕುರಿತು ಮಾತನಾಡಲಾಯಿತು.* ರೈತರು ಸಾಗಾಣಿಕೆ ವೆಚ್ಚ ಭರಿಸಲಾಗದೇ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವ ಮಾರುಕಟ್ಟೆಗೆ ಹೋಗಲು ಇಚ್ಛಿಸುವುದಿಲ್ಲ. ಸ್ಥಳೀಯ ದರದಲ್ಲಿ ಮಾರಾಟ ಮಾಡುತ್ತಿದ್ದರಿಂದ ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭ ಇದೆ. ಈ ಸಮಸ್ಯೆಯನ್ನು ತಪ್ಪಿಸಲು ಸರ್ಕಾರವೇ ಸಾಗಾಣಿಕೆ ವೆಚ್ಚ ಭರಿಸುವುದಾಗಿ ಹೇಳಿದೆ.* ಶಿವಮೊಗ್ಗದ ರೈತರು ದೆಹಲಿ ಮಾರುಕಟ್ಟೆಗೆ ತಮ್ಮ ಬೆಳೆಗಳನ್ನು ಕೊಂಡೊಯ್ದರೂ ಸಾಗಾಣಿಕೆ ವೆಚ್ಚ ಎದುರಿಸಬೇಕಾಗುತ್ತದೆ. ಈ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೇ 50ರಷ್ಟು ಭರಿಸಲಿದೆ.* ರೈತ ಮತ್ತು ರೈತ ಉತ್ಪಾದಕ ಸಂಸ್ಥೆಗಳ (ಎಫ್ಪಿಒ) ಮೂಲಕ ಬೆಳೆಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಪ್ರೋತ್ಸಾಹ ನೀಡಲು ಈ ಕ್ರಮಗಳನ್ನು ರೂಪಿಸಲಾಗುತ್ತಿದೆ.