Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಇಂಧನ ಸಂಕಷ್ಟದಲ್ಲಿದ್ದ ಶ್ರೀಲಂಕಾಗೆ ಭಾರತದ 'ದೋಸ್ತಿ' ಹಸ್ತ: ಪ್ರಧಾನಿ ಮೋದಿಗೆ ಅಧ್ಯಕ್ಷ ಅನುರ ಕುಮಾರ ಕೃತಜ್ಞತೆ
Authored by:
Akshata Halli
Date:
30 ಮಾರ್ಚ್ 2026
➤
ಪಶ್ಚಿಮ ಏಷ್ಯಾದಲ್ಲಿ (Middle East) ಉಂಟಾಗಿರುವ ಯುದ್ಧದ ಭೀತಿ ಹಾಗೂ ಬಿಕ್ಕಟ್ಟಿನ ಪರಿಣಾಮವಾಗಿ ತೀವ್ರ ಇಂಧನ ಕೊರತೆ ಎದುರಿಸುತ್ತಿದ್ದ ನೆರೆಯ ರಾಷ್ಟ್ರ ಶ್ರೀಲಂಕಾದ ನೆರವಿಗೆ ಭಾರತ ಧಾವಿಸಿದೆ. ಭಾರತದ ಈ ಸಮಯೋಚಿತ ಸಹಾಯವನ್ನು ಶ್ರೀಲಂಕಾ ಅಧ್ಯಕ್ಷ
ಅನುರ ಕುಮಾರ ದಿಸ್ಸಾನಾಯಕೆ
ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
➤
ಘಟನೆಯ ಹಿನ್ನೆಲೆ :
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸತತ ಸಂಘರ್ಷಗಳಿಂದಾಗಿ ಜಾಗತಿಕ ಇಂಧನ ಸರಬರಾಜು ವ್ಯವಸ್ಥೆಯಲ್ಲಿ ಏರುಪೇರಾಗಿದೆ. ಇದರ ನೇರ ಪರಿಣಾಮ ಶ್ರೀಲಂಕಾದ ಮೇಲಾಗಿದ್ದು, ದೇಶದಲ್ಲಿ ತೈಲದ ತೀವ್ರ ಅಭಾವ ಸೃಷ್ಟಿಯಾಗಿತ್ತು. ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಶ್ರೀಲಂಕಾ ಸರ್ಕಾರ ಭಾರತದ ಮೊರೆ ಹೋಗಿತ್ತು.
➤
ಭಾರತದ ತುರ್ತು ಸ್ಪಂದನೆ:
ಶ್ರೀಲಂಕಾ ಅಧ್ಯಕ್ಷರು ಇಂಧನ ಪೂರೈಕೆಯ ಅಡಚಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ಬೆನ್ನಲ್ಲೇ ಭಾರತ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ.
ನೆರವಿನ ಪ್ರಮಾಣ:
ಭಾರತವು ಸುಮಾರು 38,000 ಮೆಟ್ರಿಕ್ ಟನ್ ಇಂಧನವನ್ನು ತುರ್ತಾಗಿ ಕೊಲೊಂಬೊಗೆ ಕಳುಹಿಸಿಕೊಟ್ಟಿದೆ.
ತೈಲ ರವಾನೆ:
ಈ ನೆರವು ಶ್ರೀಲಂಕಾದ ದೈನಂದಿನ ಚಟುವಟಿಕೆಗಳು ಸ್ಥಗಿತಗೊಳ್ಳದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
➤
"ಕೆಲವು ದಿನಗಳ ಹಿಂದೆ ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಂಧನ ಪೂರೈಕೆಯ ಅಡಚಣೆಯ ಬಗ್ಗೆ ಮಾತನಾಡಿದ್ದೆ. ಭಾರತವು ತಕ್ಷಣವೇ ಸ್ಪಂದಿಸಿ ನೆರವು ನೀಡಿರುವುದಕ್ಕೆ ನಾನು ಅಭಾರಿಯಾಗಿದ್ದೇನೆ. ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೂ ಧನ್ಯವಾದಗಳು." —
ಅನುರ ಕುಮಾರ ದಿಸ್ಸಾನಾಯಕೆ, ಶ್ರೀಲಂಕಾ ಅಧ್ಯಕ್ಷ (X ಖಾತೆಯಲ್ಲಿನ ಸಂದೇಶ)
➤
ಭಾರತವು ತನ್ನ
'ನೇಬರ್ಹುಡ್ ಫಸ್ಟ್' (Neighborhood First)
ನೀತಿಯಡಿ ನೆರೆಯ ರಾಷ್ಟ್ರಗಳ ಸಂಕಷ್ಟಕ್ಕೆ ಸದಾ ಸ್ಪಂದಿಸುತ್ತಾ ಬಂದಿದೆ. ಈ ಹಿಂದೆ ಶ್ರೀಲಂಕಾ ಆರ್ಥಿಕ ದಿವಾಳಿತನ ಎದುರಿಸುತ್ತಿದ್ದಾಗಲೂ ಭಾರತ ಶತಕೋಟಿ ಡಾಲರ್ ಮೊತ್ತದ ಆರ್ಥಿಕ ನೆರವು ಮತ್ತು ಅಗತ್ಯ ವಸ್ತುಗಳನ್ನು ಪೂರೈಸಿತ್ತು. ಪ್ರಸ್ತುತ ಇಂಧನ ಪೂರೈಕೆಯು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
Take Quiz
Loading...