Job Description: ➤ ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮೊದಲ ಬಾರಿಗೆ ರೈಲೊಂದಕ್ಕೆ ವಾಣಿಜ್ಯ ಸಂಸ್ಥೆಯ (Brand Name) ಹೆಸರನ್ನು ಇಡಲಾಗಿದೆ. ಲಖನೌ-ದೆಹಲಿ ನಡುವೆ ಸಂಚರಿಸುವ ತೇಜಸ್ ಎಕ್ಸ್‌ಪ್ರೆಸ್ (Tejas Express) ರೈಲು ಈಗ 'ಸ್ಪ್ರೈಟ್ ತೇಜಸ್ ಎಕ್ಸ್‌ಪ್ರೆಸ್' (Sprite Tejas Express) ಎಂಬ ನೂತನ ಹೆಸರಿನೊಂದಿಗೆ ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ. ರೈಲಿನ ಸಂಖ್ಯೆ: 82501 / 82502 ಮಾರ್ಗ: ಲಖನೌ (Lucknow) ನಿಂದ ನವದೆಹಲಿ (New Delhi) ನಿರ್ವಹಣೆ: ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಬ್ರ್ಯಾಂಡಿಂಗ್ ಪಡೆದ ಸಂಸ್ಥೆ: ಕೋಕಾ-ಕೋಲಾ ಕಂಪನಿಯ ಪ್ರಸಿದ್ಧ ಪಾನೀಯ ಬ್ರ್ಯಾಂಡ್ 'ಸ್ಪ್ರೈಟ್' (Sprite) ವಿಶೇಷತೆ: ಭಾರತದಲ್ಲಿ ಬ್ರ್ಯಾಂಡ್ ಬ್ರ್ಯಾಂಡಿಂಗ್ ಒಪ್ಪಂದಕ್ಕೆ ಒಳಪಟ್ಟ ಮೊದಲ ಕಾರ್ಪೊರೇಟ್ ರೈಲು. ➤ 'ನಾನ್-ಫೇರ್ ರೆವಿನ್ಯೂ' (Non-Fare Revenue): ರೈಲ್ವೆಯು ಪ್ರಯಾಣಿಕರ ಟಿಕೆಟ್ ದರವನ್ನು ಹೆಚ್ಚಿಸದೆ ಹೆಚ್ಚುವರಿ ಆದಾಯ ಗಳಿಸಲು ಬಳಸುವ ಮಾದರಿಯನ್ನು 'ನಾನ್-ಫೇರ್ ರೆವಿನ್ಯೂ' (ಟಿಕೆಟೇತರ ಆದಾಯ) ಎನ್ನಲಾಗುತ್ತದೆ. ವಿನೈಲ್ ರ್ಯಾಪಿಂಗ್ (Vinyl Wrapping): ರೈಲಿನ ಹೊರಭಾಗದಲ್ಲಿ ಬ್ರ್ಯಾಂಡ್‌ನ ಜಾಹೀರಾತು ಬಿತ್ತರಿಸುವುದು. ಆಂತರಿಕ ಜಾಹೀರಾತು: ರೈಲಿನ ಒಳಭಾಗ ಮತ್ತು ಎಲ್‌ಇಡಿ ಪರದೆಗಳಲ್ಲಿ ಪ್ರಚಾರ ನಡೆಸುವುದು. ನಿಲ್ದಾಣಗಳಲ್ಲಿ ಧ್ವನಿವರ್ಧಕ ಪ್ರಕಟಣೆ: ರೈಲ್ವೆ ನಿಲ್ದಾಣಗಳಲ್ಲಿ ರೈಲಿನ ಹೆಸರನ್ನು 'ಸ್ಪ್ರೈಟ್ ತೇಜಸ್ ಎಕ್ಸ್‌ಪ್ರೆಸ್' ಎಂದೇ ಅಧಿಕೃತವಾಗಿ ಘೋಷಿಸಲಾಗುತ್ತದೆ. ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ