* ಇದೇ ಮೊದಲ ಬಾರಿಗೆ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಎಲ್ಲನ್ ಮಸ್ಕ್ ಮಾಲೀಕತ್ವದ ಸ್ಪೇಸ್‌ಎಕ್ಸ್ ಸಂಸ್ಥೆಯೊಂದಿಗೆ ಸೇರಿಕೊಂಡು ಸ್ಪೇಸ್ ಎಕ್ಸ್ ನ ಫಾಲ್ಕನ್-9 ರಾಕೆಟ್ ನ ನೆರವಿನಿಂದ ಸಂವಹನ ಉದ್ದೇಶದ ಉಪಗ್ರಹವನ್ನು ಉಡಾವಣೆ ಮಾಡಲಿದೆ.* 4,700 ಕೆಜಿ ತೂಕದ ಜಿಸ್ಯಾಟ್-20 ಅನ್ನು ಕಕ್ಷೆಗೆ ಸೇರಿಸಲು ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ಬಾಹ್ಯಾಕಾಶ ನೌಕೆಯನ್ನು ಇಸ್ರೋ ಬಳಸಿಕೊಳ್ಳಲಿದೆ. ಜಿಸ್ಯಾಟ್-20ಯನ್ನು ಅಮೆರಿಕದ ಫ್ಲೋರಿಡಾದಿಂದ ಕಕ್ಷೆಗೆ ಸೇರಿಸಲು ಯೋಜಿಸಲಾಗಿದೆ. ಸ್ಪೇಸ್‌ಎಕ್ಸ್ ಸಂಸ್ಥೆಯೊಂದಿಗೆ ಭಾರತ ಬಾಹ್ಯಾಕಾಶ ಇಲಾಖೆ ಮತ್ತು ಇಸ್ರೋ ಒಪ್ಪಂದ ಮಾಡಿಕೊಂಡಿವೆ.*  4 ಟನ್‌ಗಿಂತ ಜಾಸ್ತಿ ತೂಕವಿರುವ ಉಪಗ್ರಹಗಳನ್ನು ಉಡಾವಣೆ ಮಾಡುವ ಶಕ್ತಿ ಭಾರತೀಯ ರಾಕೆಟ್‌ಗಳಿಗಿಲ್ಲ. ಹಾಗಾಗಿ ಇದುವರೆಗೆ ಫ್ರಾನ್ಸ್‌ನ ಏರಿಯನ್‌ಸ್ಪೇಸ್ ಸಂಸ್ಥೆಯ ರಾಕೆಟ್‌ಗಳನ್ನು ಬಳಸಿ ಉಪಗ್ರಹಗಳ ನ್ನು ಉಡಾವಣೆ ಮಾಡಲಾಗುತ್ತಿತ್ತು. * ಫಾಲ್ಕನ್-9 ರಾಕೆಟ್ 8.3 ಟನ್ ನಷ್ಟು ಭಾರದ ಸಾಧನಗಳನ್ನು ಹೊತ್ತೊಯ್ದು ಕಕ್ಷೆಗೆ ಸೇರಿಸುವ ಸಾಮರ್ಥ್ಯವನ್ನು ಹೊಂದಿದೆ.* 10 ಟನ್ ಭಾರದ ಸಾಧನಗಳನ್ನು ಸಹ ಉಡ್ಡಯನ ಮಾಡುವ ಸಾಮರ್ಥ್ಯವಿರುವ 'ನೆಕ್ಟ್ಸ  ಜನರೇಷನ್ ಲಾಂಚ್ ವೆಹಿಕಲ್' (ಎನ್‌ಜಿಎಲ್‌ವಿ) ರಾಕೆಟ್ ಅನ್ನು ಇಸ್ರೋ ಅಭಿವೃದ್ಧಿಪಡಿಸುತ್ತಿದೆ.