* ಬ್ಯಾಂಕಿಂಗ್ ಫೈನಾನ್ಸ್ ಸಂಸ್ಥೆಯಾದ ಸೊನಾಟ ಫೈನಾನ್ಸ್ ಅನ್ನು ಕೋಟಕ್ ಬ್ಯಾಂಕ್ 537 ಕೋಟಿ ರೂಪಾಯಿಗೆ ಪೂರ್ಣವಾಗಿ ಖರೀದಿ ಮಾಡಿದೆ. * ಬ್ಯಾಂಕೇತರ ಹಣಕಾಸು ಕಂಪನಿಯಾದ ಸೊನಾಟಾ ಫೈನಾನ್ಸ್ ಸಂಸ್ಥೆಯ ದೇಶದ 10 ರಾಜ್ಯಗಳಲ್ಲಿ ಒಟ್ಟು 549 ಶಾಖೆಗಳನ್ನು ಹೊಂದಿದೆ. ಕಳೆದ ವರ್ಷದ ಡಿಸೆಂಬ‌ರ್ ಅಂತ್ಯಕ್ಕೆ ಕಂಪನಿಯು ನಿರ್ವಹಿಸುವ ಸಂಪತ್ತಿನ ಮೊತ್ತವು (ಎಯುಎಂ) 2,620 ಕೋಟಿ ಇದೆ.* 'ಸೊನಾಟಾ ಫೈನಾನ್ಸ್ ಕಂಪನಿಯ ಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಂಡಿದೆ' ಎಂದು ಕೋಟಕ್ ಬ್ಯಾಂಕ್ ಷೇರುಪೇಟೆಗೆ ತಿಳಿಸಿದೆ.* ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಷೇರುಗಳು ಮಾರ್ಚ್ 28 ರಂದು ಬಿಎಸ್‌ಇಯಲ್ಲಿ 1.15 ಶೇಕಡಾ ಏರಿಕೆಯಾಗಿ 1796 ಕ್ಕೆ ವಹಿವಾಟು ನಡೆಸುತ್ತಿವೆ. ಕಂಪನಿಯ ಷೇರುಗಳು ಅದರ 52 ವಾರಗಳ ಗರಿಷ್ಠ 2,063 ರಿಂದ ಸುಮಾರು 12 ಶೇಕಡಾ ಕಡಿಮೆಯಾಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ 3,57,015 ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.* ಷೇರು ಮಾರುಕಟ್ಟೆಯಲ್ಲೂ ಕೋಟಕ್ ಬ್ಯಾಂಕ್ ದೀರ್ಘಾವಧಿಯಲ್ಲಿ ಮಲ್ಟಿಬ್ಯಾಗರ್ ಎನಿಸಿದ್ದು, 2001ರಲ್ಲಿ ಇದ್ದ ಅದರ ಷೇರುಬೆಲೆ 2,064 ರೂವರೆಗೂ ಏರಿದೆ. 23 ವರ್ಷದಲ್ಲಿ ಶೇ. 75,000 ದಷ್ಟು ಮೌಲ್ಯ ಹೆಚ್ಚಳ ಆಗಿದೆ.