* ಭಾರತವು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಯುವಜನತೆಗೆ ಸಕ್ರಿಯ ಅವಕಾಶ ಕಲ್ಪಿಸಲು ‘SOAR ಫಾರ್ ಎಐ ರೆಡಿನೆಸ್’ ಎಂಬ ಹೊಸ ಉಪಕ್ರಮಕ್ಕೆ ಚಾಲನೆ ನೀಡಿದೆ.* ಕೌಶಲಾಭಿವೃದ್ಧಿ ರಾಜ್ಯ ಸಚಿವ ಜಯಂತ್ ಚೌಧರಿ ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಎಐ ಬಗ್ಗೆ ಅರಿವು ಮೂಡಿಸಲು ಹಾಗೂ ಮೂಲಭೂತ ಜ್ಞಾನ ಕಲಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.* ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ 15 ಗಂಟೆಗಳ ‘ಎಐ ಟು ಬಿ ಅವೇರ್, ಎಐ ಟು ಆಕ್ಟ್, ಎಐ ಟು ಮಾಸ್ಟರ್’ ಎಂಬ ಮಾಡ್ಯೂಲ್ ಕಲಿಸಲಾಗುತ್ತದೆ. ಶಿಕ್ಷಕರಿಗಾಗಿ 45 ಗಂಟೆಗಳ ‘ಎಐ ಫಾರ್ ಎಜುಕೇಟರ್ಸ್’ ತರಬೇತಿ ಸಹ ನೀಡಲಾಗುವುದು.* ಈ ಕ್ರಮದ ಮೂಲಕ ಎಐ ತಂತ್ರಜ್ಞಾನದ ಅರ್ಥಪೂರ್ಣ ಹಾಗೂ ಪರಿಣಾಮಕಾರಿ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.