* ಧಾರವಾಡ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆಯ ಸಹಯೋಗದಲ್ಲಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ ಅವರ 134ನೇ ಜಯಂತಿ ಅಂಗವಾಗಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ಭಾರತ ಸಂವಿಧಾನದ ಪೀಠಿಕೆಯ 10 ಅಡಿ ಎತ್ತರದ ಲೋಹದ ಶಿಲ್ಪವನ್ನು ನಿರ್ಮಿಸಿ ಧಾರವಾಡದ ರಾಣಿ ಕಿತ್ತೂರು ಚನ್ನಮ್ಮ ಉದ್ಯಾನವನದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಲೋಕಾರ್ಪಣೆ ಮಾಡಿದರು. ಈ ಶಿಲ್ಪವು ಸಂವಿಧಾನ ಪುಸ್ತಕದ ಆಕರದಲ್ಲಿ ವಿನ್ಯಾಸಗೊಳಿಸಲಾಗಿದೆ.* ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರು ಈ ಶಿಲ್ಪದ ವಿಶೇಷತೆಗಳನ್ನು ವಿವರಿಸಿದರು.* ಶಿಲ್ಪವು ಉನ್ನತ ದರ್ಜೆಯ ವಸ್ತುಗಳಿಂದ ತಯಾರಾಗಿದ್ದು, ಕಲಾತ್ಮಕ ಕೌಶಲ್ಯದಿಂದ ರಚಿಸಲಾಗಿದೆ. ಸ್ಟೇನ್ಲೆಸ್ ಸ್ಟೀಲ್ನ ಹೊರ ಹೊದಿಕೆಗೆ ಬಫ್ಡ್ ಮ್ಯಾಟ್ ಫಿನಿಶ್ ನೀಡಲಾಗಿದೆ. ಮುಂಭಾಗದ ಪುಟಗಳಲ್ಲಿ ಪೀಠಿಕೆಯನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕೆತ್ತಲಾಗಿದೆ.* ಈ ಪಠ್ಯವನ್ನು 1 ಮಿ.ಮೀ. ಪಿವಿಡಿ ಚಿನ್ನ ಲೇಪಿತ ಸ್ಟೇನ್ಲೆಸ್ ಸ್ಟೀಲ್ ಹಾಳೆಯಲ್ಲಿ ನೈಟ್ರೋಜನ್ ಲೇಸರ್ ಮೂಲಕ ನಿಖರವಾಗಿ ಕೆತ್ತಲಾಗಿದೆ.* ಶಿಲ್ಪವು 10 ಅಡಿ ಎತ್ತರ, 12 ಅಡಿ ಅಗಲ ಮತ್ತು ಸುಮಾರು 1300–1500 ಕೆ.ಜಿ ತೂಕ ಹೊಂದಿದ್ದು, 8 ರಿಂದ 12 ಇಂಚುಗಳ ದಪ್ಪದ ಅಕ್ಷರಗಳನ್ನು ಒಳಗೊಂಡಿದೆ. ಆಂತರಿಕ ಚೌಕಟ್ಟಿಗೆ ಸೌಮ್ಯ ಉಕ್ಕು ಹಾಗೂ 12 ಎಂಎಂ ಜೆ-ಬೋಲ್ಟ್ಗಳು ಮತ್ತು ನಟ್ಗಳಿಂದ ಲಂಗರು ಹಾಕಲಾಗಿದೆ. * ಈ ಶಿಲ್ಪ ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆಯ ಮಹತ್ವವನ್ನು ಅರಿತುಕೊಳ್ಳುವ ಉತ್ತಮ ಅವಕಾಶವನ್ನು ಒದಗಿಸುತ್ತದೆ.