* ರಾಷ್ಟಪತಿ ದ್ರೌಪದಿ ಮುರ್ಮು(President Murmu) ಅವರು ಮಂಗಳವಾರ ಸಂಸತ್ತಿನಲ್ಲಿ ದೇಶದ ಸಂವಿಧಾನವನ್ನು ಅಂಗೀಕರಿಸಿದ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥ 75 ರೂಪಾಯಿ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.* ನವದೆಹಲಿಯ ಸಂವಿಧಾನ ಭವನದ ಸೆಂಟ್ರಲ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಈ ಐತಿಹಾಸಿಕ ನಾಣ್ಯವನ್ನು ಬಿಡುಗಡೆ ಮಾಡಲಾಯಿತು.* ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿ ಸರ್ಕಾರ 2015ರ ನವೆಂಬರ್ 26ನ್ನು ಸಂವಿಧಾನ ದಿನವಾಗಿ ಘೋಷಿಸಿದೆ.* ಮುರ್ಮು ಅವರು "ಮೇಕಿಂಗ್ ಆಫ್ ದಿ ಕಾನ್ಸ್ಟಿಟ್ಯೂಷನ್ ಆಫ್ ಇಂಡಿಯಾ: ಎ ಗ್ಲಿಂಪ್ಸ್" ಮತ್ತು "ಮೇಕಿಂಗ್ ಆಫ್ ದಿ ಕಾನ್ಸ್ಟಿಟ್ಯೂಷನ್ ಆಫ್ ಇಂಡಿಯಾ & ಇಟ್ಸ್ ಗ್ಲೋರಿಯಸ್ ಜರ್ನಿ" ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು.* ರಾಷ್ಟ್ರಪತಿಗಳು ಸಂವಿಧಾನದ ಮೊದಲ ಸಂಸ್ಕೃತ ಪ್ರತಿಯನ್ನು ಬಿಡುಗಡೆ ಮಾಡಿದರು.* ಭಾರತ ಸಂವಿಧಾನವು ಜೀವಂತ ಹಾಗೂ ಪ್ರಗತಿಪರ ದಾಖಲೆಯಾಗಿದ್ದು ಈ ಮೂಲಕ ಸಮಾಜದಲ್ಲಿ ಸಾಮಾಜಿಕ ನ್ಯಾಯ ಮತ್ತು ಅಂತರ್ಗತ ಅಭಿವೃದ್ಧಿಯ ಗುರಿಗಳನ್ನು ಸಾಧಿಸಿದ್ದೇವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದರು.* ನಮ್ಮ ಪ್ರಜಾಪ್ರಭುತ್ವದಲ್ಲಿ ಮಹಿಳಾ ಮೀಸಲಾತಿಯ ಕಾನೂನಿಂದಾಗಿ ಮಹಿಳಾ ಸಬಲೀಕರಣದ ಹೊಸ ಯುಗವನ್ನೇ ಪ್ರಾರಂಭಿಸಿದೆ ಎಂದು ಹೇಳಿದರು.