* 'ಸಂತ ಸೇವಾಲಾಲ್ ಪ್ರಶಸ್ತಿ' ಸ್ಥಾಪಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಈ ಪ್ರಶಸ್ತಿಯು ₹1 ಲಕ್ಷ ನಗದು ಒಳಗೊಂಡಿದೆ. * ಈ ಪ್ರಶಸ್ತಿ ಬಂಜಾರಾ ಸಮುದಾಯದ ಹಿರಿಯ ಸಾಧಕರಿಗೆ ಅವರ ವಿಶೇಷ ಸಾಧನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.* ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಎ. ಆರ್. ಗೋವಿಂದ ಸ್ವಾಮಿ ಅವರು ಈ ಪ್ರಶಸ್ತಿ ಸ್ಥಾಪನೆಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದರು.* ಸಂತ ಸೇವಾಲಾಲ್ ಅವರು ಒಬ್ಬ ಭಾರತೀಯ ಸಾಮಾಜಿಕ-ಧಾರ್ಮಿಕ ಸುಧಾರಕ ಮತ್ತು ಸಮುದಾಯ ನಾಯಕ. ಇವರನ್ನು ಗೋರ್ ಬಂಜಾರ ಸಮುದಾಯದವರಿಂದ ಆಧ್ಯಾತ್ಮಿಕ ಗುರು ಎಂದು ಗೌರವಿಸಲಾಗುತ್ತದೆ.* 15 ಫೆಬ್ರುವರಿ 1739 ರಂದು,ಭೀಮ ನಾಯ್ಕ ಹಾಗೂ ಧರ್ಮಣಿ ಬಾಯಿ ದಂಪತಿಗಳಿಗೆ, ಬಂಜಾರ ಸಮುದಾಯದಲ್ಲಿ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗುತ್ತಿ ತಾಲ್ಲೂಕಿನ, ಸೇವಾಗಡ ಎಂಬ ಗ್ರಾಮದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ.