* ಮಹಾತ್ಮ ಗಾಂಧಿ (ಹೊಸ) ಸರಣಿಯ ₹20 ನೋಟುಗಳು RBI ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿಯೊಂದಿಗೆ ಮುದ್ರಣಗೊಂಡು ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ಹಳೆಯ ನೋಟುಗಳು ಚಲಾವಣೆಯಲ್ಲಿ ಮುಂದುವರೆಯುತ್ತವೆ.* RBI ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಡಿಸೆಂಬರ್ 11, 2024 ರಂದು ಅಧಿಕಾರ ಸ್ವೀಕರಿಸಿದರು. ಅವರ ಕಾರ್ಯಾವಧಿ ಮೂರು ವರ್ಷಗಳಾಗಿರುತ್ತದೆ.* ಅವರ ನೇತೃತ್ವದಲ್ಲಿ ಬಿಡುಗಡೆ ಆಗುತ್ತಿರುವ,RBIಯಿಂದ ಹೊರಬರುವ ಮೊದಲ ನೋಟು ಇದಾಗಿದೆ.* ಹೊಸ ಹಾಗೂ ಹಳೆಯ ₹20 ನೋಟುಗಳ ನಡುವಿನ ಏಕೈಕ ಭಿನ್ನತೆ ಎಂದರೆ ಹೊಸ ನೋಟುಗಳಲ್ಲಿ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿ ಇರುವುದು. ಹಳೆಯ ನೋಟುಗಳ ಬಳಕೆ ಮುಂದುವರೆಯುತ್ತದೆ ಎಂದು RBI ಸ್ಪಷ್ಟಪಡಿಸಿದೆ.* ಈ ಹೊಸ ನೋಟುಗಳು ಮಹಾತ್ಮ ಗಾಂಧಿ (ಹೊಸ) ಸರಣಿಗೆ ಸೇರಿದ್ದು, ಹಸಿರು-ಹಳದಿ ಬಣ್ಣದಲ್ಲಿದ್ದು, ಏಲೋರಾ ಗುಹೆಗಳ ಚಿತ್ರವನ್ನು ಹೊಂದಿರುತ್ತದೆ.* RBI ಪ್ರಕಾರ, ಕಾನೂನುಬದ್ಧವಾಗಿರುವ ಎಲ್ಲ ನೋಟುಗಳನ್ನು ಭಾರತದೆಲ್ಲೆಡೆ ಬಳಸಬಹುದು.* ದೇಶದ ನಾಲ್ಕು ಕರೆನ್ಸಿ ಮುದ್ರಣಾಲಯಗಳಲ್ಲಿ ನೋಟುಗಳನ್ನು ಮುದ್ರಿಸಲಾಗುತ್ತದೆ. ನಾಸಿಕ್ ಮತ್ತು ದೇವಾಸ್ ಮುದ್ರಣಾಲಯಗಳು SPMCIL ಅಡಿಯಲ್ಲಿ ಇವೆ, ಹಾಗೂ ಮೈಸೂರು ಮತ್ತು ಸಾಲ್ಬೋನಿ ಮುದ್ರಣಾಲಯಗಳು BRBNMPL ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.* ನಾಣ್ಯಗಳ ತಯಾರಿಕೆ ಮುಂಬೈ, ಹೈದರಾಬಾದ್, ಕೋಲ್ಕತ್ತಾ ಹಾಗೂ ನೋಯ್ಡಾದ ಟಂಕಸಾಲೆಗಳಲ್ಲಿ ನಡೆಯುತ್ತದೆ. ಈ ಎಲ್ಲ ಟಂಕಸಾಲೆಗಳು SPMCIL ಒಡೆತನದಲ್ಲಿವೆ. ಹೊಸ ₹20 ನೋಟುಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ.