Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಸಂಗೈ ಉತ್ಸವ 2025: ಮಣಿಪುರದ ಪರಂಪರೆ ಮತ್ತು ಪ್ರಕೃತಿ ಸೌಂದರ್ಯದ ಮಹೋತ್ಸವ
10 ಡಿಸೆಂಬರ್ 2025
*
ಸಂಗೈ ಉತ್ಸವ 2025 ಅನ್ನು ಮಣಿಪುರದ ರಾಜಧಾನಿ ಇಂಫಾಲ್ನಲ್ಲಿ ಭವ್ಯವಾಗಿ ಆಯೋಜಿಸಲಾಗಿದೆ.
ಪ್ರತಿವರ್ಷದಂತೆ ಈ ಬಾರಿ ಕೂಡ 10 ದಿನಗಳ ಈ ರಾಜ್ಯಮಟ್ಟದ ಉತ್ಸವವು ನವೆಂಬರ್
21ರಿಂದ ನವೆಂಬರ್ 30, 2025ರವರೆಗೆ
ನಡೆಯಿತು. ಮಣಿಪುರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯಗಳು ಹಾಗೂ ವೈವಿಧ್ಯತೆಯನ್ನು ದೇಶ ಮತ್ತು ಜಗತ್ತಿನ ಮುಂದೆ ಪರಿಚಯಿಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ.
* ಈ ಉತ್ಸವದಲ್ಲಿ ಮಣಿಪುರದ ಪರಂಪರ ನೃತ್ಯಗಳು, ಸಂಗೀತ, ಕೈಮಗ್ಗ ಮತ್ತು ಕರಕುಶಲ ವಸ್ತುಗಳು, ಸ್ಥಳೀಯ ಆಹಾರ ವೈವಿಧ್ಯ, ಜನಪದ ಕಲೆಗಳು ಹಾಗೂ ಸಾಂಪ್ರದಾಯಿಕ ಕ್ರೀಡೆಗಳನ್ನು ಪ್ರದರ್ಶಿಸಲಾಗುತ್ತದೆ. ಇದಲ್ಲದೆ, ರಾಜ್ಯದ 35ಕ್ಕೂ ಹೆಚ್ಚು ಬುಡಕಟ್ಟುಗಳು ಮತ್ತು ಸಮುದಾಯಗಳು ಒಂದೇ ವೇದಿಕೆಯಲ್ಲಿ ಸೇರುತ್ತಿದ್ದು, ಸಹಜವಾಗಿಯೇ ಸಾಂಸ್ಕೃತಿಕ ಸಾಮರಸ್ಯ ಮತ್ತು ಏಕತೆಯ ಸೊಗಡನ್ನು ಮೂಡಿಸುತ್ತವೆ.
* ಈ ವರ್ಷದ ಸಂಗೈ ಉತ್ಸವವನ್ನು
“ಹೂವುಗಳು ಸಾಮರಸ್ಯವನ್ನು ಉಸಿರಾಡುವ ಸ್ಥಳ”
ಎಂಬ ವಿಷಯದಡಿ ಬಹು ಸ್ಥಳಗಳಲ್ಲಿ ಆಯೋಜಿಸಲಾಗಿತ್ತು. ಮಣಿಪುರದ ನೈಸರ್ಗಿಕ ಸೌಂದರ್ಯ, ಸಂಸ್ಕೃತಿ ಮತ್ತು ಶಾಂತಿಯ ಸಂದೇಶವನ್ನು ಈ ಥೀಮ್ ಪ್ರತಿಬಿಂಬಿಸುತ್ತದೆ.
* ಹತ್ತು ದಿನಗಳ ಈ ಉತ್ಸವಕ್ಕೆ
ಮಣಿಪುರದ ರಾಜ್ಯ ಪ್ರಾಣಿ ಹಾಗೂ ಅಪರೂಪದ ಸಂಗೈ ಜಿಂಕೆ
(Brow-antlered Deer) ಯ ಹೆಸರನ್ನು ಇಡಲಾಗಿದೆ. ಸಂಗೈ ಜಿಂಕೆ ಮಣಿಪುರದ ಕೀಬುಲ್ ಲಮ್ಜಾವೋ ರಾಷ್ಟ್ರೀಯ ಉದ್ಯಾನವನದ ಹೆಮ್ಮೆಯ ಸಂಕೇತವಾಗಿದ್ದು, ಪ್ರಕೃತಿ ಸಂರಕ್ಷಣೆ ಮತ್ತು ಜೀವವೈವಿಧ್ಯದ ಮಹತ್ವವನ್ನು ಸಾರುತ್ತದೆ. ಸಂಗೈ ಉತ್ಸವ 2025 ಮಣಿಪುರದ ಸಂಸ್ಕೃತಿ, ಪ್ರಕೃತಿ ಮತ್ತು ಜನಜೀವನವನ್ನು ಒಗ್ಗೂಡಿಸಿದ ಒಂದು ಜೀವಂತ ಹಬ್ಬವಾಗಿ ಮೂಡಿಬಂದಿತು.
Take Quiz
Loading...