* ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಜಲಮಂಡಳಿಯ ಎರಡು ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಚಾಲನೆ ನೀಡಿದರು.* 'ಸಂಚಾರಿ ಕಾವೇರಿ' ಮತ್ತು 'ಸರಳ ಕಾವೇರಿ'. ಈ ಯೋಜನೆಗಳ ಉದ್ದೇಶ ಟ್ಯಾಂಕರ್ ನೀರಿನ ಮಾಫಿಯಾದ ನಿಯಂತ್ರಣ ಹಾಗೂ ಎಲ್ಲರಿಗೂ ಸುಲಭವಾಗಿ ಕಾವೇರಿ ನೀರು ಲಭ್ಯವಾಗಿಸುವುದು.* ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಸಮಾರಂಭದಲ್ಲಿ, ಟ್ಯಾಂಕರ್ನ ಕಾವೇರಿ ನೀರನ್ನು ಕುಡಿಯುವ ಮೂಲಕ 'ಸಂಚಾರಿ ಕಾವೇರಿ' ಯೋಜನೆಗೆ ಚಾಲನೆ ನೀಡಲಾಯಿತು.* ಈ ಯೋಜನೆಯ ಮೂಲಕ ಗ್ರಾಹಕರು ಜಲಮಂಡಳಿಯ ವೆಬ್ಸೈಟ್ ಅಥವಾ ಆ್ಯಪ್ ಮೂಲಕ ಟ್ಯಾಂಕರ್ ನೀರಿಗಾಗಿ ಬುಕ್ಕಿಂಗ್ ಮಾಡಬಹುದು. 24 ಗಂಟೆ ಒಳಗೆ BIS ಪ್ರಮಾಣಿತ ಕುಡಿಯುವ ನೀರನ್ನು ಮನೆಗೆ ತಲುಪಿಸಲಾಗುತ್ತದೆ. ಇದು ದೇಶದ ಮಟ್ಟಿಗೆ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ಬರುವ ಯೋಜನೆಯಾಗಿದೆ.* 'ಸರಳ ಕಾವೇರಿ' ಯೋಜನೆಯ ಮೂಲಕ, ಕಾವೇರಿ ನೀರಿನ ಸಂಪರ್ಕಕ್ಕಾಗಿ ಒಂದು ಬಾರಿಗೆ ಸಂಪೂರ್ಣ ಶುಲ್ಕ ಪಾವತಿಸಲು ಅಸಾಧ್ಯವಾಗುತ್ತಿರುವ ಅಪಾರ್ಟ್ಮೆಂಟ್ ನಿವಾಸಿಗಳಿಗೆ 12 ಕಂತುಗಳ ಪಾವತಿ ವ್ಯವಸ್ಥೆ ಕಲ್ಪಿಸಲಾಗಿದೆ.* ಪ್ರಸ್ತುತ 600 ಚದರ ಅಡಿ ಅಳತೆಯ ಸಣ್ಣ ಮನೆಗಳಿಗೆ ₹1000 ಪಾವತಿಸಿ ನೀರು ಸಂಪರ್ಕ ಪಡೆಯುವ ಅವಕಾಶ ನೀಡಲಾಗಿದೆ. ಶೇ20ರಷ್ಟು ಮೊತ್ತವನ್ನು ಪೂರೈಸಿ, ಉಳಿದ ಮೊತ್ತವನ್ನು ಹಂತ ಹಂತವಾಗಿ ಪಾವತಿಸಬಹುದು.* ಈ ಸಮಾರಂಭದಲ್ಲಿ ಶಾಸಕರಾದ ರಿಜ್ವಾನ್ಅರ್ಷದ್, ಎಸ್.ಟಿ. ಸೋಮಶೇಖರ್, ಶ್ರೀನಿವಾಸ್ ಹಾಗೂ ಜಲಮಂಡಳಿ ಅಧ್ಯಕ್ಷ ರಾಮ್ಪ್ರಸಾತ್ ಮನೋಹರ್ ಉಪಸ್ಥಿತರಿದ್ದರು.