* 2025-26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರವನ್ನು ‘ಸಂಭ್ರಮ ಶನಿವಾರ’ ಎಂಬ ಹೆಸರಿನಲ್ಲಿ ಬ್ಯಾಗ್ರಹಿತ ದಿನವನ್ನಾಗಿ ಆಚರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.* ಉರ್ದು ಮಾಧ್ಯಮ ಶಾಲೆಗಳಲ್ಲಿ ಶನಿವಾರ ಪೂರ್ಣ ಕಾಲ ಶೈಕ್ಷಣಿಕ ದಿನವಾಗಿರುವ ಕಾರಣ, ಪ್ರತಿ ತಿಂಗಳ 3ನೇ ಶುಕ್ರವಾರದಂದು ಬ್ಯಾಗ್ರಹಿತ ದಿನವನ್ನು ಜರಗಿಸಲು ಸೂಚಿಸಲಾಗಿದೆ.* ಈ ದಿನ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಅಧಿಕಾರಿಗಳು ಹಾಗೂ ಸಿಆರ್ಪಿಗಳು ಕಡ್ಡಾಯವಾಗಿ ಶಾಲೆಗೆ ಭೇಟಿ ನೀಡಿ, ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಬೇಕೆಂದು ಸೂಚಿಸಲಾಗಿದೆ.* ವಿದ್ಯಾರ್ಥಿಗಳಲ್ಲಿ ನಾಗರಿಕ ಜಾಗೃತಿ ಬೆಳೆಸುವ ಉದ್ದೇಶದಿಂದ, ಮಕ್ಕಳನ್ನು ವಿವಿಧ ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸಲು 10 ಸ್ವಯಂ ವಿವರಣಾತ್ಮಕ ಘಟಕಗಳು ಹಾಗೂ ಶಿಕ್ಷಕರಿಗಾಗಿ ಮಾರ್ಗದರ್ಶಕ ಕೈಪಿಡಿಗಳನ್ನು ಸಿದ್ಧಪಡಿಸಲಾಗಿದೆ.