Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಸಮಗ್ರ ಅರಣ್ಯ ಸಮೀಕ್ಷೆಯೊಂದಿಗೆ ರಾಜ್ಯದಲ್ಲಿ ಹುಲಿ ಗಣತಿ ಪ್ರಕ್ರಿಯೆ ಆರಂಭ
Authored by:
Akshata Halli
Date:
6 ಜನವರಿ 2026
* ರಾಜ್ಯದ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ
ಹುಲಿ ಸೇರಿದಂತೆ ಮಾಂಸಾಹಾರಿ ಮತ್ತು ಸಸ್ಯಾಹಾರಿ ಪ್ರಾಣಿಗಳ ಗಣತಿ ಪ್ರಕ್ರಿಯೆ ಅಧಿಕೃತವಾಗಿ ಆರಂಭಗೊಂಡಿದೆ.
ಈ ಬಗ್ಗೆ ಬೀದರ್ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ
ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ
ಅವರು, ರಾಜ್ಯದ 38 ಅರಣ್ಯ ವಿಭಾಗಗಳಲ್ಲಿ ಗಣತಿಗಾಗಿ ಅಗತ್ಯ ತರಬೇತಿ ಪೂರ್ಣಗೊಂಡಿದ್ದು, ಕಾಳಿ, ಭದ್ರಾ, ನಾಗರಹೊಳೆ, ಬಂಡೀಪುರ ಹಾಗೂ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಂತೆ ಎಲ್ಲ ಅರಣ್ಯ ವಲಯಗಳಲ್ಲಿ ಸಮೀಕ್ಷೆ ನಡೆಯುತ್ತಿದೆ ಎಂದು ತಿಳಿಸಿದರು.
*
ಪ್ರತಿ ನಾಲ್ಕು ವರ್ಷ
ಗಳಿಗೊಮ್ಮೆ ದೇಶದಾದ್ಯಂತ ನಡೆಯುವ ಹುಲಿ ಅಂದಾಜು ಗಣತಿಯ ಭಾಗವಾಗಿ ಈ ಬಾರಿ
ಆರನೇ ಗಣತಿ
ಕೈಗೊಳ್ಳಲಾಗಿದ್ದು, ಹಿಂದಿನ ಬಾರಿ
2006, 2010, 2014, 2018
ಹಾಗೂ
2022
ರಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಕಳೆದ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಸುಮಾರು
563
ಹುಲಿಗಳಿರುವ ಅಂದಾಜು ಇದ್ದು, ದೇಶದಲ್ಲೇ ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು ಎಂದು ಸಚಿವರು ಹೇಳಿದರು.
* ತಾಂತ್ರಿಕ ಮತ್ತು ವೈಜ್ಞಾನಿಕ ವಿಧಾನ :
ಗಣತಿಯನ್ನು ಕೇವಲ ಪ್ರಾಣಿಗಳನ್ನು ಎಣಿಸುವುದಕ್ಕೆ ಸೀಮಿತಗೊಳಿಸದೆ, ವೈಜ್ಞಾನಿಕ ಹಂತಗಳಲ್ಲಿ ವಿಂಗಡಿಸಲಾಗಿದೆ:
=>
ಹೆಜ್ಜೆಗುರುತು ಮತ್ತು ಸಾಕ್ಷ್ಯಧಾರಿತ ಸಮೀಕ್ಷೆ:
ಅರಣ್ಯ ಸಿಬ್ಬಂದಿ ಕಾಡಿನ ಆಳಕ್ಕೆ ತೆರಳಿ ಹುಲಿಗಳ ಮಲ (Scat), ಹೆಜ್ಜೆಗುರುತು (Pugmarks) ಮತ್ತು ಮರಗಳ ಮೇಲೆ ಅವು ಮಾಡುವ ಉಗುರಿನ ಗುರುತುಗಳನ್ನು ದಾಖಲಿಸುತ್ತಾರೆ.
=>
ಕ್ಯಾಮೆರಾ ಟ್ರ್ಯಾಪಿಂಗ್ (Camera Traps):
ರಾಜ್ಯದ 5 ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು
2,300ಕ್ಕೂ ಹೆಚ್ಚು ಅತ್ಯಾಧುನಿಕ ಕ್ಯಾಮೆರಾ
ಗಳನ್ನು ಅಳವಡಿಸಲಾಗಿದೆ. ಹುಲಿಗಳ ಮೈಮೇಲಿನ ಪಟ್ಟೆಗಳು (Stripes) ಮನುಷ್ಯನ ಬೆರಳಚ್ಚಿನಂತೆ ಭಿನ್ನವಾಗಿರುತ್ತವೆ. ಕ್ಯಾಮೆರಾ ಚಿತ್ರಗಳ ಮೂಲಕ ಈ ಪಟ್ಟೆಗಳನ್ನು ವಿಶ್ಲೇಷಿಸಿ, ಒಂದೇ ಹುಲಿಯನ್ನು ಎರಡು ಬಾರಿ ಎಣಿಸದಂತೆ ಎಚ್ಚರಿಕೆ ವಹಿಸಲಾಗುತ್ತದೆ.
=>
ಸಸ್ಯಾಹಾರಿ ಪ್ರಾಣಿಗಳ ಗಣತಿ:
ಹುಲಿಗಳ ಅಸ್ತಿತ್ವವು ಅವುಗಳ ಆಹಾರವಾದ ಜಿಂಕೆ, ಕಾಡೆಮ್ಮೆಗಳ ಮೇಲೆ ಅವಲಂಬಿತವಾಗಿದೆ. ಆದ್ದರಿಂದ, ಆಹಾರ ಸರಪಳಿಯನ್ನು ಅರ್ಥಮಾಡಿಕೊಳ್ಳಲು ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆಯನ್ನು ಸಮೀಕ್ಷೆ ಮಾಡಲಾಗುತ್ತದೆ.
* ಈ ಗಣತಿ ಪ್ರಕ್ರಿಯೆ
ಮೂರು ಹಂತಗಳಲ್ಲಿ ನಡೆಯಲಿದೆ.
ಮೊದಲ ಹಂತದಲ್ಲಿ ಮೂರು ದಿನಗಳ ಕಾಲ ಪ್ರತಿ ಅರಣ್ಯ ವಿಭಾಗದಲ್ಲಿ ಮೂರು ಸದಸ್ಯರ ತಂಡಗಳು ದಿನಕ್ಕೆ ಸುಮಾರು 5 ಕಿಲೋಮೀಟರ್ ಕಾಡಿನಲ್ಲಿ ಸಂಚರಿಸಿ ಹುಲಿ, ಚಿರತೆ ಸೇರಿದಂತೆ ಮಾಂಸಾಹಾರಿ ಪ್ರಾಣಿಗಳ ಕಾಲು ಗುರುತು, ಲದ್ದಿ, ನೇರ ದರ್ಶನದ ಮಾಹಿತಿಯನ್ನು ಸಂಗ್ರಹಿಸಲಿವೆ.
ಜನವರಿ 15ರಿಂದ 17ರವರೆಗೆ
ನಡೆಯುವ ಎರಡನೇ ಹಂತದಲ್ಲಿ ಜಿಂಕೆ, ಕಡವೆ, ಕಾಡೆಮ್ಮೆ, ಕಾಡುಕೋಣ ಸೇರಿದಂತೆ ಸಸ್ಯಾಹಾರಿ ಪ್ರಾಣಿಗಳ ದರ್ಶನದ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ಈ ದತ್ತಾಂಶದ ಆಧಾರದಲ್ಲಿ ಮೂರನೇ ಹಂತದಲ್ಲಿ ಸೂಕ್ತ ಸ್ಥಳಗಳಲ್ಲಿ ಕ್ಯಾಮೆರಾ ಟ್ರ್ಯಾಪ್ಗಳನ್ನು ಅಳವಡಿಸಲಾಗುತ್ತದೆ.
*
ಹುಲಿ ಯೋಜನೆಯ ನಿರ್ದೇಶಕ ರಮೇಶ್ ಕುಮಾರ್
ಅವರನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಗೆ
ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು,
ಇಡೀ ಗಣತಿ ಪ್ರಕ್ರಿಯೆಯ ಉಸ್ತುವಾರಿ ಅವರದ್ದಾಗಿರುತ್ತದೆ. ಅರಣ್ಯವಾರು ಹುಲಿ ಸಂಖ್ಯೆ, ಆಹಾರವಾಗಿರುವ ಸಸ್ಯಾಹಾರಿ ಪ್ರಾಣಿಗಳ ಲಭ್ಯತೆ ಹಾಗೂ ಕಾಡಿನ ಧಾರಣಾ ಸಾಮರ್ಥ್ಯವನ್ನು ಗುರುತಿಸುವ ಉದ್ದೇಶದಿಂದ ಈ ಸಮೀಕ್ಷೆ ನಡೆಸಲಾಗುತ್ತಿದೆ.
* ಕ್ಯಾಮೆರಾ ಟ್ರ್ಯಾಪ್ಗಳ ನಿಯೋಜನೆ :
ಒಟ್ಟು
2,300ಕ್ಕೂ ಹೆಚ್ಚು ಕ್ಯಾಮೆರಾ ಟ್ರ್ಯಾಪ್ಗಳನ್ನು
ವಿವಿಧ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅಳವಡಿಸಲಾಗಿದೆ:ನಾಗರಹೊಳೆ (600), ಬಂಡೀಪುರ (550), ಬಿಆರ್ಟಿ (300), ಭದ್ರಾ (330) ಹಾಗೂ ಕಾಳಿ (450) ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕ್ಯಾಮೆರಾ ಟ್ರ್ಯಾಪ್ ಸಮೀಕ್ಷೆ ಆರಂಭವಾಗಿದೆ. ಜೊತೆಗೆ, ಹುಲಿ ಸಂರಕ್ಷಿತ ಪ್ರದೇಶಗಳ ಹೊರಗೂ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲು ಕ್ರಮ ವಹಿಸಲಾಗಿದೆ.
* ಇತ್ತೀಚೆಗೆ ಹುಲಿಗಳು ಕಾಡಿನಿಂದ ನಾಡಿನ ಕಡೆಗೆ ಕಾಣಿಸಿಕೊಳ್ಳುತ್ತಿರುವುದು ರಾಜ್ಯದಲ್ಲಿ ಹುಲಿ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಸೂಚನೆಯಾಗಿದ್ದು, ಈ ಬಾರಿ ನಡೆಯುತ್ತಿರುವ ಗಣತಿಯಿಂದ ನಿಖರ ಚಿತ್ರಣ ಲಭ್ಯವಾಗಲಿದೆ ಎಂದು ಸಚಿವ ಈಶ್ವರ ಖಂಡ್ರೆ ಅವರು ವಿಶ್ವಾಸ ವ್ಯಕ್ತಪಡಿಸಿದರು.
Take Quiz
Loading...